ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ದ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದಕ್ಕೆ ಕಾರಣ ಡಿಸಿಎಂ ಡಿಕೆ ಶಿವಕುಮಾರ್ ಎಂದು ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿರಾರೊಂದಿಗೆ ಮಾತನಾಡಿದ ಅವರು, ಕನಕಪುರ ಬಂಡೆ ಅನ್ನೋದೇ ಡೇಂಜರ್. ವಯನಾಡ್, ಪಶ್ಚಿಮ ಘಟ್ಟ ಹಾಗೂ ಕೊಡಗಿನಲ್ಲಿ ಭೂಕುಸಿತ ಆಗಿದೆ. ಭೂಕುಸಿತ ಆದ್ರೂ ಬಂಡೆಗಳು ರಕ್ಷಣೆ ಕೊಟ್ಟಿವೆಯೇ? ಭೂಕುಸಿತ ಆಗಿ ಹಲವಾರು ಜನ ಸಾಯೋಕೆ ಬಂಡೆಗಳೇ ಕಾರಣ. ಕರ್ನಾಟಕದಲ್ಲೂ ಈ ಬಂಡೆಗಳೇ ಕಾರಣ ಆಗುವ ಕಾಲ ದೂರವಿಲ್ಲ’ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಈ ಸ್ಥಿತಿಗೆ ಡಿಕೆ ಶಿವಕುಮಾರ್ ಅವರೇ ಕಾರಣ ಎಂದು ಹೆಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.
‘ರಾಜ್ಯಪಾಲರ ಅಧಿಕಾರದ ವಿರುದ್ಧ ನೀವು ಏನು ಮಾಡ್ತಾಯಿದ್ದೀರಾ? ನನ್ನ ವಿರುದ್ಧ ಆರೋಪ ಬಂದಾಗ ನಾನು ಏಕಾಂಗಿಯಾಗಿ ಎದುರಿಸುತ್ತೇನೆ. ನನ್ನ ವಿರುದ್ಧ ಯಾಕೆ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡಬೇಕು ಎಂದು ಕಾಂಗ್ರೆಸ್‌ನವರು ಹೇಳುತ್ತಿದ್ದಾರೆ’ ಎಂದು ವಾಗ್ದಾಳಿ ಮಾಡಿದ್ದಾರೆ.
‘ನೀವು ತಪ್ಪು ಮಾಡದೇ ಇದ್ದರೆ ನಿಮ್ಮಲ್ಲಿ ನೈತಿಕತೆ ಇದ್ದರೆ ರಾಜ್ಯಪಾಲರ ಮುಖಕ್ಕೆ ಮಸಿ ಬಳಿದು ಪ್ರತಿಭಟನೆ ಮಾಡ್ತಾಯಿದ್ರಾ? ಏನು ಸಾಧನೆ ಮಾಡಿದ್ದೀರಿ ಎಂದು ಪ್ರತಿಭಟನೆ ಮಾಡ್ತಾಯಿದಿರಿ? ನನ್ನ ಮೇಲೆ ಏನೇ ಆರೋಪ ಇದ್ದರೂ ತನಿಖೆ ಮಾಡಿ’ ಎಂದು ಹೆಚ್‌ಡಿಕೆ ಸವಾಲು ಹಾಕಿದ್ದಾರೆ.
‘ನಿಮ್ಮಲ್ಲೇ ನಿಮ್ಮನ್ನು ಇಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ನಿಮ್ಮವರೇ ನಿಮ್ಮನ್ನು ಇಳಿಸುವ ಸಂಚು ಮಾಡುತ್ತಿದ್ದಾರೆ’ ಎಂದು ಹೆಚ್‌ಡಿ ಕುಮಾರಸ್ವಾಮಿ ದೂರಿದ್ದಾರೆ.