ಏನೇ ಸಮಸ್ಯೆ ಇದ್ರೂ ಹೇಳಿ, ನಾವು ಭಾವನೆ ಮೇಲೆ ರಾಜಕಾರಣ ಮಾಡಲ್ಲ : ಡಿಸಿಎಂ ಡಿಕೆಶಿ

Prasthutha|

- Advertisement -

ಬೆಂಗಳೂರು: ಏನೇ ಸಮಸ್ಯೆ ಇದ್ರೂ ಹೇಳಿ. ನಾವು ಭಾವನೆ ಮೇಲೆ ರಾಜಕಾರಣ ಮಾಡಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಇಂದಿನಿಂದ ಬೆಂಗಳೂರಿನಲ್ಲಿ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಯುತ್ತಿದ್ದು, ಇಂದು ಕೆ.ಆರ್​.ಪುರಂನ ಐಟಿಐ ಕ್ರೀಡಾಂಗಣದಲ್ಲಿ ಕಾರ್ಯಕ್ರಮಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ನೀವು ನಮ್ಮನ್ನು ಭೇಟಿ ಮಾಡಲು ಬಹಳ ಕಷ್ಟ ಆಗುತ್ತೆ. ಶಾಸಕರಿಗೆ ಬಹಳಷ್ಟು ಒತ್ತಡ ಇರುತ್ತೆ. ಹೀಗಾಗಿ ಎಲ್ಲಾ ಅಧಿಕಾರಿಗಳನ್ನು ಕರೆದುಕೊಂಡು ನಿಮ್ಮ ಮನೆ ಬಾಗಿಲಿಗೆ ಬಂದಿದ್ದೇನೆ. ಇವತ್ತು ಸಾಯಂಕಾಲದವರೆಗೂ ನಾನು ಇಲ್ಲೇ ಇರ್ತಿನಿ. ನಿಮ್ಮ‌ ಸಮಸ್ಯೆ ಕೇಳಿಯೇ ಹೋಗ್ತಿನಿ. ಮೊದಲು ಕೌಂಟರ್ ಗೆ ಹೋಗಿ ರಿಜಿಸ್ಟ್ರೇಷನ್ ಮಾಡಿಕೊಳ್ಳಿ. ನಿಮ್ಮ ಕ್ಷೇತ್ರದ ಶಾಸಕರಾದ ಬೈರತಿ ಬಸವರಾಜ್ ಹಾಗೂ ಮಂಜುಳಾ ಲಿಂಬಾವಳಿ ಸಾಕಷ್ಟು ಬೇಡಿಕೆ ಇಟ್ಟಿದ್ದಾರೆ. ನನಗೆ ರಾಜಕಾರಣ ಮುಖ್ಯ ಅಲ್ಲ. ನಿಮ್ಮ ಬದುಕಿನ ಮೇಲೆ ರಾಜಕಾರಣ ಮಾಡಲ್ಲ. ನಾನು ನಿಮ್ಮ ಕಷ್ಟ ಕೇಳಲು ಇಲ್ಲಿಗೆ ಬಂದಿದ್ದೇನೆ ಎಂದರು.

Join Whatsapp