ಬೆಂಗಳೂರು: ಡಿಕೆ ಶಿವಕುಮಾರ್ ಅವರ ಚಿತ್ರವನ್ನು ತಿರುಚಿ, ಅಶ್ಲೀಲವಾಗಿ ವೈರಲ್ ಮಾಡಿದ ಮೂವರು ಆರೋಪಿಗಳ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಬೆಂಗಳೂರು ಹೈಗ್ರೌಂಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಫ್ಐಆರ್ ನಲ್ಲಿ ಸಂತೋಷ್, ರಾಜೇಶ್, ಕೇಸರಿ ಸಾಮ್ರಾಟ್ ಎಂಬವರನ್ನು ಆರೋಪಿಗಳೆಂದು ಉಲ್ಲೇಖಿಸಲಾಗಿದೆ.
ಆರೋಪಿಗಳ ವಿರುದ್ಧ ಕೆಪಿಸಿಸಿ ಕಾನೂನು ಘಟಕ ದೂರು ನೀಡಿತ್ತು. ಆರೋಪಿಗಳು ದಿಯು-ದಮನ್ ನ ಬಿಜೆಪಿ ನಾಯಕನ ಅಶ್ಲೀಲ ಚಿತ್ರಕ್ಕೆ ಡಿಕೆ ಶಿವಕುಮಾರ್ ಅವರ ಮುಖವನ್ನು ಎಡಿಟ್ ಮಾಡಿ ಸೇರಿಸಿದ್ದಾರೆ.