ಆಪರೇಷನ್ ಹಸ್ತ | ಡಿಕೆ ಶಿವಕುಮಾರ್ ಬಳಿ 42 ಜನರ ಲಿಸ್ಟ್ ಇದೆ: ಜಗದೀಶ್ ಶೆಟ್ಟರ್

Prasthutha|

ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ಬಳಿ 42 ಜನರ ಲಿಸ್ಟ್ ಇದೆ ಎಂದು ಕಾಂಗ್ರೆಸ್ ಎಂಎಲ್ಸಿ ಜಗದೀಶ ಶೆಟ್ಟರ್ ಹೇಳಿದ್ದಾರೆ.

- Advertisement -


ಬಿಜೆಪಿಯ ಹಲವು ನಾಯಕರು ಕಾಂಗ್ರೆಸ್ ಗೆ ಸೇರ್ಪಡೆಯಾಗಲಿದ್ದಾರೆ ಎಂಬ ವಿಚಾರವಾಗಿ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಸಿಎಂ, ಡಿಸಿಎಂಗೆ ನನ್ನನ್ನು ಭೇಟಿ ಮಾಡಿದವರ ಮಾಹಿತಿ ನೀಡಿದ್ದೇನೆ. ನನ್ನ ಕಡೆ ಬಂದವರನ್ನು ನಾಯಕರಿಗೆ ಪರಿಚಯ ಮಾಡಿಸ್ತೇನೆ ಅಷ್ಟೇ. ನನ್ನನ್ನು ಹಾಲಿ ಶಾಸಕರು ಸಂಪರ್ಕ ಮಾಡಿಲ್ಲ ಎಂದು ಹೇಳಿದ್ದಾರೆ.


ಚುನಾವಣೆಗೆ ಕಾಂಗ್ರೆಸ್ ಹಣ ಸಂಗ್ರಹಿಸುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿದ ಅವರು, ಬಿಜೆಪಿಯಲ್ಲಿ ಇರುವವರು ಸತ್ಯಹರಿಶ್ಚಂದ್ರರಾ ಎಂದು ಪ್ರಶ್ನಿಸಿದ್ದಾರೆ. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಹತ್ತಾರು ಹಗರಣಗಳ ಬಗ್ಗೆ ಕೇಳಿ ಬಂತು. ಇವರ ಹೇಳಿಕೆಯಿಂದ ಇಡೀ ರಾಜಕೀಯ ಅಸಹ್ಯ ಪಡುವಂತೆ ಆಗುತ್ತಿದೆ. ತಾವು ಸತ್ಯಹರಿಶ್ಚಂದ್ರರು ಎಂದು ಬಿಜೆಪಿಯವರು ಹೇಳಲಿ ನೋಡೋಣ ಎಂದು ಶೆಟ್ಟರ್ ಸವಾಲು ಹಾಕಿದ್ದಾರೆ.