ನವದೆಹಲಿ: ಪಂಚೆ ಹಾಕಿ ಬಂದ ರೈತನಿಗೆ ಜಿ.ಟಿ.ಮಾಲ್ ಸಿಬ್ಬಂದಿ ಪ್ರವೇಶ ನಿರಾಕರಣೆ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಮಾಲ್ ಗಳಿಗೆ ಮಾರ್ಗಸೂಚಿ ಹೊರಡಿಸಲಾಗುವುದು ಎಂದು ಬೆಂಗಳೂರು ಅಭಿವೃದ್ಧಿ ಸಚಿವರಾಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಘೋಷಣೆ ಮಾಡಿದ್ದಾರೆ.
ವಿಧಾನಸಭೆಯಲ್ಲಿ ಸರ್ಕಾರದ ಪರವಾಗಿ ಹೇಳಿಕೆ ನೀಡಿದ ಅವರು, ಮಾಲ್ ಗಳಿಗೆ ನಾವು ಮಾರ್ಗಸೂಚಿ ತರುತ್ತೇವೆ. ಪಂಚೆ ನಮ್ಮ ಸಂಸ್ಕೃತಿ. ಇಂತಹ ಘಟನೆಗಳು ಮತ್ತೆ ಆಗಬಾರದು ಎಂದು ಹೇಳಿದರು.
ಜಿ.ಟಿ.ಮಾಲ್ ತೆರಿಗೆ ಬಾಕಿ ಇತ್ತು. ಸ್ವಲ್ಪ ಕಟ್ಟಿದ್ದಾರೆ ಇನ್ನೂ ಬಾಕಿ ಇದೆ. ಚೆಕ್ ಕೊಟ್ಟಿದ್ದಾರೆ, ಇನ್ನೂ ತೆರಿಗೆ ಬಾಕಿ ಇದೆ. ಸದ್ಯ ಜಿ.ಟಿ.ಮಾಲ್ ಮುಚ್ಚಿಸಲಾಗಿದೆ ಎಂದು ಸ್ಪಷ್ಟನೆ ನೀಡಿದರು.