ಮಂಗಳೂರು : ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಮತ್ತಷ್ಟು ಉತ್ತೇಜನ ಕ್ರಮಗಳನ್ನು ಕೈಗೊಂಡಿರುವ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಕೋವಿಡ್ ಮುಕ್ತ ಗ್ರಾಮ ಪುರಸ್ಕಾರ ಪ್ರಕಟಿಸಿದೆ.
ಕೊರೋನಾ ಎರಡನೇ ಅಲೆ ನಿಯಂತ್ರಣ ಹಿನ್ನೆಲೆಯಲ್ಲಿ ಜನರಿಗೆ ಪೋತ್ಸಾಹ ನೀಡುವ ನಿಟ್ಟಿನಲ್ಲಿ ಹದಿನೈದು ದಿನಗಳ ಅವದಿಯಲ್ಲಿ ಕೋವಿಡ್ ಪಾಸಿಟಿವ್ ಇಲ್ಲದ ಗ್ರಾಮಕ್ಕೆ ಪುರಸ್ಕಾರ ಮಾಡಲು ದ.ಕ ಜಿಲ್ಲಾ ಪಂಚಾಯತ್ ನಿರ್ಧರಿಸಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕುಮಾರ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಹೇಳಿಕೆ ನೀಡಿದ ಅವರು, ಜಿಲ್ಲಾ ಪಂಚಾಯತ್ ಗೆ ಜಿಲ್ಲೆಯ ಪಂಚಾಯತ್ ಅಧ್ಯಕ್ಷರು ಮತ್ತು ಸದಸ್ಯರು ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯತ್ ಈ ನಿರ್ಧಾರಕ್ಕೆ ಮುಂದಾಗಿದೆ. ಝೀರೊ ಕೊವಿಡ್ ಪಾಸಿಟಿವ್ ಗ್ರಾಮಗಳಿಗೆ ಕೊವಿಡ್ ಮುಕ್ತ ಗ್ರಾಮ ಮತ್ತು ಪುರಸ್ಕಾರ ಚಿಂತನೆ ನಡೆಸಿದ್ದು, ಈಗಾಗಲೇ ಜಿಲ್ಲೆಯ ಒಂಬತ್ತು ಗ್ರಾಮಗಳು ಈಗಾ ಕೋವಿಡ್ ಮುಕ್ತವಾಗಿದೆ. ಈ ಗ್ರಾಮಗಳಿಗೆ ಪುರಸ್ಕಾರ ಮತ್ತು ಕೊವಿಡ್ ಮುಕ್ತ ಗ್ರಾಮ ಘೋಷಣೆಗೆ ಚಿಂತನೆ ಮಾಡಲಾಗಿದೆ ಎಂದಿದ್ದಾರೆ.