ಪುತ್ತೂರು: ಕಾಣಿಯೂರಿನ ಗುಂಪು ಹಲ್ಲೆ ಪ್ರಕರಣ, ನಾಗರಾಜ್ ಎಂಬ ಯುವಕನಿಗೆ ಕಂಬಕ್ಕೆ ಕಟ್ಟಿ ಥಳಿತ ಇವೆರಡೂ ಪ್ರಕರಣದಲ್ಲಿ ಭಾಗಿಯಾದವರನ್ನು ಯಾಕೆ ಇಲಾಖೆ FIR ದಾಖಲಿಸಿ, ಬಂಧಿಸುತ್ತಿಲ್ಲ ಎಂದು SDPI ರಾಜ್ಯ ಸಮಿತಿ ಸದಸ್ಯ ರಿಯಾಝ್ ಕಡಂಬು ಪ್ರಶ್ನಿಸಿದ್ದಾರೆ.
ದ.ಕ ಜಿಲ್ಲೆಯಲ್ಲಿ ನಡೆಯುತ್ತಿರುವ ಗುಂಪು ಹಲ್ಲೆ ಕುರಿತು ಕರ್ನಾಟಕ ADGP ಅಲೋಕ್ ಕುಮಾರ್ ಅವರನ್ನು ಟ್ವೀಟ್ ಮೂಲಕ ಪ್ರಶ್ನಿಸಿದ ರಿಯಾಝ್, ADGP ಅಲೋಕ್ ಕುಮಾರ್ ಅವರೇ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಎರಡು ಕೃತ್ಯಗಳು! ಒಂದು ಶಮೀರ್ & ರಮೀಝ್ ಎಂಬ ಎರಡು ಯುವಕರ ಮೇಲೆ ಗುಂಪು ಹಲ್ಲೆ ನಡೆಸಿದ್ದು, ಇನ್ನೊಂದು ನಾಗರಾಜ್ ಎಂಬಾತನನ್ನು ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿದ್ದು, ಇದೆರಡೂ ಕೊಲೆ ಪ್ರಯತ್ನಗಳಾಗಿವೆ. ತಮ್ಮ ಇಲಾಖೆಯಿಂದ ಹೆಸರಿಲ್ಲದೆ FIR ದಾಖಲಿಸಿ ಯಾರನ್ನೂ ಬಂಧಿಸದೆ ಇರಲು ಕಾರಣವೇನು? ನ್ಯಾಯ ಸಿಗಬಹುದೇ? ಎಂದು ಕೇಳಿದ್ದಾರೆ.
ಕಾಣಿಯೂರು ಗುಂಪುಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಬೆಳ್ಳಾರೆ ಪೊಲೀಸರು 17 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ.