ದ.ಕ ಜಿಲ್ಲೆ ಪೊಲೀಸ್ ರಾಜ್ಯವಾಗಿ ಪರಿವರ್ತನೆಯಾಗಿದೆ: ಅನ್ವರ್ ಸಾದಾತ್

Prasthutha|

ತೊಕ್ಕೊಟ್ಟು: ಬೋಳಿಯಾರ್ ಘಟನೆಯನ್ನು ಮುಂದಿಟ್ಟುಕೊಂಡು ಪೊಲೀಸರು ದ.ಕ ಜಿಲ್ಲೆಯನ್ನು ಪೊಲೀಸ್ ರಾಜ್ಯವನ್ನಾಗಿ ಪರಿವರ್ತಿಸಿದ್ದಾರೆ ಎಂದು ಎಸ್ಡಿಪಿಐ ದ.ಕ ಜಿಲ್ಲಾಧ್ಯಕ್ಷ ಅನ್ವರ್ ಸಾದಾತ್ ಬಜತ್ತೂರು ಆರೋಪಿಸಿದ್ದಾರೆ.

- Advertisement -

ಇತ್ತೀಚಿಗೆ ನಡೆದ ಬೋಳಿಯಾರ್’ನಲ್ಲಿ ಪೊಲೀಸ್ ದೌರ್ಜನ್ಯವನ್ನು ಖಂಡಿಸಿ ತೊಕ್ಕೊಟ್ಟುವಿನ ಪ್ರೆಸ್ ಕ್ಲಬ್’ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಪೋಲೀಸರು ನಡೆಸುತ್ತಿರುವ ಮುಸ್ಲಿಮ್ ಭೇಟೆಯನ್ನು ತರಾಟೆಗೆ ತೆಗೆದುಕೊಂಡರು.
ಸಂಘಪರಿವಾರವನ್ನು ತೃಪ್ತಿಪಡಿಸಲು ಪೊಲೀಸರು ಹಾಗೂ ಸರಕಾರ ಪ್ರಯತ್ನ ಮಾಡುತ್ತಿದೆ. ಇಲ್ಲಿನ ಶಾಸಕರು ಪತ್ರಿಕಾಗೋಷ್ಠಿಯಲ್ಲಿ ಜನರ ಕಿವಿಗೆ ಹೂವಿಟ್ಟು ದುಬೈಗೆ ಹೋಗಿದ್ದಾರೆ.ಜನಪ್ರತಿನಿಧಿಯಾದವರು ಜನರ ಸಮಸ್ಯೆಗೆ ಸ್ಪಂದಿಸಬೇಕು. ಇಲ್ಲಿನ ಘಟನೆಯ ಬಗ್ಗೆ ಶಾಸಕರು ಸ್ಪಂದನೆ ಮಾಡುತ್ತಿಲ್ಲ ಮತ್ತು ಅವರು ವಿದೇಶದಲ್ಲಿ ಕೂತಿದ್ದಾರೆ ಎಂದು ತಿಳಿಸಿದರು.

ಪೊಲೀಸರು ಮುಸ್ಲಿಮರ ಮನೆಗೆ ದಾಳಿ ಮಾಡಿ ಬಂಧಿಸಿದ್ದಾರೆ. ಆದರೆ ಇಲ್ಲಿವರೆಗೆ ಸಂಘಪರಿವಾರದ ನಾಯಕರ ಮನೆ ಮೇಲೆ ದಾಳಿ ಮಾಡಿಲ್ಲ ಬಂಧಿಸಿಲ್ಲ ಎಂದು ದೂರಿದರು.

- Advertisement -

ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಮಿತಿ ಸದಸ್ಯರಾದ ರಿಯಾಜ್ ಕಡಂಬು, ನವಾಜ್ ಉಳ್ಳಾಲ್, ಕ್ಷೇತ್ರಾಧ್ಯಕ್ಷ ಬಶೀರ್ ಎಸ್. ಎಮ್, ಜಿಲ್ಲಾ ಕಾರ್ಯದರ್ಶಿ ಸುಹೈಲ್ ಪಳ್ನಿರ್, ಬಂಧಿತ ಸಿರಾಜ್ ಪತ್ನಿ ಖೈರುನ್ನೀಸ ಉಪಸ್ಥಿತರಿದ್ದರು

Join Whatsapp