ದ.ಕ ಹಿರಿಯ ಪ್ರಾಥಮಿಕ ಶಾಲೆ ಅಮೆಮ್ಮಾರ್’ನಲ್ಲಿ 78ನೇ ಸ್ವಾತಂತ್ರೋತ್ಸವ ಆಚರಣೆ, ಸನ್ಮಾನ ಕಾರ್ಯಕ್ರಮ

Prasthutha|

- Advertisement -

ಫರಂಗಿಪೇಟೆ: ದಕ್ಷಿಣ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಅಮೆಮ್ಮಾರ್ ನಲ್ಲಿ 78ನೇ ಸ್ವಾತಂತ್ರೋತ್ಸವ ಆಚರಣೆ ನಡೆಸಲಾಯಿತು

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಝುಬೈರ್ ಅಮೆಮ್ಮಾರ್ ದ್ವಜಾರೋಹಣಗೈದರು ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ರಜಾಕ್, ಮೊಹಮ್ಮದ್ ಶಾಫಿ, ಸಾರಮ್ಮ, ನಬಿಸ, ರುಕ್ಸಾನ, ಶಾಲಾ ಮುಖ್ಯ ಶಿಕ್ಷಕಿ ಝರೀನಾ ಫೆರ್ನಾಂಡಿಸ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು

- Advertisement -

ಈ ಶಾಲೆಯಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಪಡೆದು
2023-24 ರ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ತುಂಬೆ ಬಿಎ ಕಾಲೇಜ್ ನ ವಿದ್ಯಾರ್ಥಿಗಳಾದ ಆಯಿಶತ್ ಮುಬಶಿರ 625 ರಲ್ಲಿ 558 (89.28ಶೇ) ಮತ್ತು ಪಿಯುಸಿ ಪರೀಕ್ಷೆಯಲ್ಲಿ ಪ್ರಸನ್ನ ಕುಮಾರ್ ಪ್ರಕಾಶ್ ಬಾಬು ರವರು 600ರಲ್ಲಿ 554(92.33ಶೇ), ಹಾಗೂ ದ್ವಿತೀಯ ಪಿಯುಸಿಯಲ್ಲಿ ಸಾಬೀನಾ 600ರಲ್ಲಿ 558(93%) ಅಂಕ ಪಡೆದು ಸಾಧನೆಗೈ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು



Join Whatsapp