ದಿವ್ಯಾ ಹಾಗರಗಿ ಗೃಹ ಸಚಿವರ ಮನೆಯಲ್ಲಿಯೇ ಇದ್ದಾಳೆ: ವಕೀಲ ಜಗದೀಶ್ ಗಂಭೀರ ಆರೊಪ

Prasthutha|

ಬೆಂಗಳೂರು: PSI ನೇಮಕಾತಿ ಹಗರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಗೃಹ ಸಚಿವ ಅರಗ ಜ್ಞಾನೇಂದ್ರ  ಅವರ ಮನೆಯಲ್ಲೇ ಬಚ್ಚಿಟ್ಟುಕೊಂಡಿದ್ದಾಳೆ ಎಂದು ವಕೀಲ ಜಗದೀಶ್ ಆರೋಪಿಸಿದ್ದಾರೆ.

- Advertisement -

ಈ ಬಗ್ಗೆ ವೀಡಿಯೋ ಸಂದೇಶ ಮಾಡಿದ ಜಗದೀಶ್ “ ಸಿಐಡಿಗಳು ಹುಡುಕುತ್ತಿರುವ ದಿವ್ಯಾ ಹಾಗರಗಿ ಗೃಹಸಚಿವರ ಮನೆಯಲ್ಲೇ ಬಚ್ಚಿಟ್ಟುಕೊಂಡಿದ್ದಾಳೆ ಅಥವಾ ಬಿಜೆಪಿಯವರ ಆಶ್ರಯದಲ್ಲೇ ಇದ್ದಾಳೆ ಎಂದು ನಮಗೆ ಬಲವಾದ ಸಂಶಯವಿದೆ. ಸರ್ಕಾರ ಮತ್ತು ಕೆಲವು ಐಪಿಎಸ್ ಅಧಿಕಾರಿಗಳೇ ಸ್ವತ ಆಕೆಯನ್ನು ರಕ್ಷಿಸುತ್ತಿದ್ದು ಮುಂಗಡ ಜಾಮೀನು ಪಡೆದು ಬೇಲ್ ಸಿಕ್ಕ ಮೇಲೆ ಹೊರಬರುವ ಎಲ್ಲಾ ಸಿದ್ಧತೆಗಳು ನಡೆಯುತ್ತಿವೆ ಎಂದು ಆರೋಪಿಸಿದ್ದಾರೆ.

ಆಕೆಗೆ ಬಂಧನವಾಗದಂತೆ ಅಧಿಕಾರಿಗಳೇ ನೋಡಿಕೊಳ್ಳುತ್ತಿದ್ದು ಅದರ ಜೊತೆಗೆ ದಿವ್ಯಾ ಹಾಗರಗಿ ಮತ್ತು ಐಪಿಎಸ್ ಅಧಿಕಾರಿ ರವಿ ಡಿ ಚೆನ್ನಣ್ಣನವರ್ ಜೊತೆಗಿರುವ ಚಿತ್ರ ಕೂಡಾ ಕಂಡುಬಂದಿದೆ ಎಂದು ಹೇಳಿದ ಅವರು, ಐಪಿಎಸ್ ಅಧಿಕಾರಿಗಳಿಗೂ ಇದರಲ್ಲಿ ಕೈವಾಡವಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.



Join Whatsapp