ಕೊಡಗಿನಲ್ಲಿ ಮುಸ್ಲಿಂ ಧರ್ಮಗುರುಗಳ ಮೇಲೆ ಹಲ್ಲೆ: ಜಿಲ್ಲಾ ಮದನೀಸ್ ಅಸೋಸಿಯೇಷನ್ ನಿಂದ ತೀವ್ರ ಖಂಡನೆ

Prasthutha|

ಮಡಿಕೇರಿ : ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕಾಕೋಟುಪರಂಬಿನಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಧರ್ಮಗುರುಗಳ ಮೇಲೆ ಪತ್ನಿ, ಮಕ್ಕಳ ಮುಂದೆಯೇ ಹಲ್ಲೆ ಮಾಡಿರುವುದನ್ನು ಕೊಡಗು ಜಿಲ್ಲಾ ಮದನೀಸ್ ಅಸೋಸಿಯೇಷನ್ ತೀವ್ರವಾಗಿ ಖಂಡಿಸಿದ್ದು, ಹಲ್ಲೆಕೋರರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದೆ.

- Advertisement -

ಕಬಡಕ್ಕೇರಿ ಮಸೀದಿಯ ಧರ್ಮಗುರುಗಳಾದ ಹಾರಿಸ್ ಮುಸ್ಲಿಮಾರ್ ಎಂಬವರು ತಮ್ಮ ಪತ್ನಿ ಹಾಗೂ ಮಕ್ಕಳ ಜೊತೆ ಗುರುವಾರ ಸಂಜೆ ವಿರಾಜಪೇಟೆಯಿಂದ ಕಬಡಕ್ಕೇರಿಗೆ ಕಾರಿನಲ್ಲಿ ಸಂಚರಿಸುತ್ತಿರುವಾಗ ಕಾಕೋಟುಪರಂಬು ಮೈತಾಡಿ ಜಂಕ್ಷನ್ ನಲ್ಲಿ ಆಟೋದಲ್ಲಿ ಬಂದ ಮೂವರು ದುಷ್ಕರ್ಮಿಗಳು ಹಲ್ಲೆ ನಡೆಸಿದ್ದು, ಕಾರನ್ನು ಅಡ್ಡಗಟ್ಟಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಅವಮಾನಿಸಿದ್ದಾರೆ.

ಅಲ್ಲದೆ ಅವರ ಪತ್ನಿ, ಮಕ್ಕಳ ಮೇಲೂ ಹಲ್ಲೆಗೂ ಮುಂದಾಗಿದ್ದು, ಈ ಘಟನೆಯನ್ನು ತೀವ್ರವಾಗಿ ಖಂಡಿಸುವುದಾಗಿ ಅಸೋಸಿಯೇಷನ್ ನ ಜಿಲ್ಲಾಧ್ಯಕ್ಷ ಅಬ್ದುಲ್ ಹಮೀದ್ ಮದನಿ ತಿಳಿಸಿದ್ದು, ಪೊಲೀಸರು ತಕ್ಷಣ ದುಷ್ಕರ್ಮಿಗಳನ್ನು ಬಂಧಿಸಬೇಕೆಂದು ಆಗ್ರಹಿಸಿದ್ದಾರೆ

Join Whatsapp