ಅಲ್-ಫುರ್ಖಾನ್ ಇಸ್ಲಾಮಿಕ್ ಪದವಿ ಪೂರ್ವ ಕಾಲೇಜ್‌ನಲ್ಲಿ ದ.ಕ ಜಿಲ್ಲಾಮಟ್ಟದ ಫುಟ್ ಬಾಲ್ ಕ್ರೀಡಾಕೂಟ

Prasthutha|

- Advertisement -

ಮೂಡುಬಿದಿರೆ: ದ.ಕ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಸಂಯೋಗದಿಂದ ಅಲ್-ಫುರ್ಖಾನ್ ಇಸ್ಲಾಮಿಕ್ ಪದವಿ ಪೂರ್ವ ಕಾಲೇಜಿನಲ್ಲಿ ದ.ಕ ಜಿಲ್ಲಾಮಟ್ಟದ ಫುಟ್ ಬಾಲ್ ಕ್ರೀಡಾಕೂಟವು ದಿನಾಂಕ 21-09-2024 ರಂದು ನಡೆಸಲಾಯಿತು.

ಪಂದ್ಯಕೂಟದ ಉದ್ಘಾಟನೆಯನ್ನು ಸಿ. ಡಿ ಜಯಣ್ಣ ಉಪ ನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ದ.ಕ ಜಿಲ್ಲೆ, ಡಾ.ಕುರಿಯನ್ ಪ್ರಾಂಶುಪಾಲರು ಆಳ್ವಾಸ್ ಪದವಿ ಕಾಲೇಜು ಮೂಡುಬಿದಿರೆ, ತಾಲೂಕು ಕ್ರೀಡಾ ಸಂಯೋಜಕರಾದ ನವೀನ್ ಜೈನ್ ಇವರು ಫುಟ್ ಬಾಲ್ ಕಿಕ್ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

- Advertisement -

ಸೋತವನಿಗೆ ಮತ್ತು ಗೆದ್ದವನಿಗೆ ಜಾಗವಿದೆ. ಆದರೆ ಸುಮ್ಮನೆ ಕುಳಿತುಕೊಂಡು ಆಡಿ ಮಾತನಾಡುವವನಿಗೆ ಯಾವತ್ತೂ ಜಾಗವಿಲ್ಲ ಎಂದು ಸಿ.ಡಿ ಜಯಣ್ಣರವರು ಕಾರ್ಯಕ್ರಮದ ಉದ್ದೇಶಿಸಿ ಮಾತನಾಡಿದರು. ಅತಿಥಿಯಾಗಿ ಭಾಗವಹಿಸಿದ್ದ ಡಾ.ಕುರಿಯನ್ ಅವರು ನೆಲ್ಸನ್ ಮಂಡೇಲಾರವರ ನೆನಪಿಸುತ್ತ ಕ್ರೀಡಾಪಟುಗಳಿಗೆ ಶುಭಹಾರೈಸಿದ್ದರು.

ಪಂದ್ಯಕೂಟದಲ್ಲಿ 9 ತಂಡಗಳು ಭಾಗವಹಿಸಿದ್ದವು. ಪ್ರಥಮ ಸ್ಥಾನವನ್ನು ಮ್ಯಾಡೆಲೈನ್ ಪಿ.ಯು ಕಾಲೇಜು ಮೂಲ್ಕಿ ತಾಲೂಕು ಪಡೆದುಕೊಂಡರೆ, ದ್ವಿತೀಯ ಸ್ಥಾನವನ್ನು ಸೆಕ್ರೇಡ್ ಹಾರ್ಟ್ ಮಡಂತ್ಯಾರ್ ಬೆಳ್ತಂಗಡಿ ತಾಲೂಕು ಪಡೆದುಕೊಂಡಿತ್ತು. ಬೆಸ್ಟ್ ಗೋಲ್ ಕೀಪರ್ ಶಾರನ್ ಮೂಲ್ಕಿ, ಬೆಸ್ಟ್ ಡಿಫೆಂಡರ್ ಮೊಹಮ್ಮದ್ ಅಫ್ಲ ಬೆಳ್ತಂಗಡಿ, ಬೆಸ್ಟ್ ಸ್ರ್ಟೈಕರ್ ಮೊಹಮ್ಮದ್ ತಮೀಮ್ ಬೆಳ್ತಂಗಡಿ, ಬೆಸ್ಟ್ ಅಲ್ ರೌಂಡರ್ ಮೊಹಮ್ಮದ್ ಹಝೀಮ್ ಮೂಲ್ಕಿ ಪ್ರಶಸ್ತಿಯನ್ನು ಪಡೆದುಕೊಂಡರು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಯುವರಾಜ್ ಜೈನ್ ಅಧ್ಯಕ್ಷರು ಎಕ್ಸೆಲೇಂಟ್ ಪಿ.ಯು ಕಾಲೇಜು ಮೂಡಬಿದಿರೆ, ಅತಿಥಿಗಳಾಗಿ ಅಬುಲಾಲ್ ಪುತ್ತಿಗೆ ಮ್ಯಾನೆಜಿಂಗ್ ಪಾರ್ಟ್ನರ್ ಪೋರ್ಚುನ್ ಬಿಲ್ಡರ್ಸ್, ಸಂಸ್ಥೆಯ ಮ್ಯಾನೆಜಿಂಗ್ ಟ್ರಸ್ಟಿ ಮಹಮ್ಮದ್ ಅಶ್ಫಕ್ , ಆಡಳಿತಾಧಿಕಾರಿ ಮಹಮ್ಮದ್ ಶಹಾಮ್, ಅರಬಿಕ್ ಪ್ರಾಂಶುಪಾಲರಾದ ಶೇಕ್ ಅಬ್ದುಲ್ ಮುಸವಿರ್ ಮದನಿ, ಟೆಕ್ನಿಕಲ್ ಮುಖ್ಯಸ್ಥ ನೂರ್ ಮಹಮ್ಮದ್, ಕೊರ್ಡಿನೇಟರ್ ಹಕಿಬ್ ಜಾವಿದ್, ತರಬೇತುದಾರರಾದ ಅಕ್ರಂ ಮತ್ತು ಸಫಾನ್ , ಬೋದಕ ಮತ್ತು ಬೋದಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.


ಪಂದ್ಯಕೂಟದ ನಿರೂಪಣೆಯನ್ನು ಬೋದಕ ಸಿಬ್ಬಂದಿಗಳಾದ ಮಹಮ್ಮದ್ ನಾಸಿರ್ ಮತ್ತು ಶಕೀಬ್ ಹುಸೇನ್ ಮಾಡಿದ್ದರು.



Join Whatsapp