ಬೆಳ್ತಂಗಡಿ :ಕನ್ಯಾಡಿಯ ರಾಮ ಕ್ಷೇತ್ರದ ಕಾರ್ಯಕ್ರಮದಲ್ಲಿ, ಮದ್ರಸಾಗಳು ಭಯೋತ್ಪಾದನೆಯ ಮೂಲ ಎಂಬ ಆರೋಪ ಹೊರಿಸಿ ಬಿಜೆಪಿಯ ಮುಖಂಡ ಹರಿಕೃಷ್ಣ ಬಂಟ್ವಾಳ ಕೋಮು ಸಂಘರ್ಷ ಹರಡವ ರೀತಿಯಲ್ಲಿ ತನ್ನ ನಾಲಿಗೆಯನ್ನು ಹರಿಯಬಿಟ್ಟಿದ್ದಾನೆ.
ಈ ಬಗ್ಗೆ ಪ್ರತಿಕ್ರಿಯಸಿರುವ ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ, ಈ ರೀತಿಯಲ್ಲಿ ಧರ್ಮ ಜಾತಿಗಳ ಮಧ್ಯೆ ದ್ವೇಷ ಹರಡುವ ಬಿಜೆಪಿಯ ನೀಚ ರಾಜಕೀಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಮೇಲಿಂದ ಮೇಲೆ ಮುಸ್ಲಿಮ್ ಸಮುದಾಯದ ಧಾರ್ಮಿಕ ಭಾವನೆಯನ್ನು ಕೆರಳಿಸಲು ಮದ್ರಸ , ಕುರ್ಆನ್ , ಈದ್ಗಾ ಮತ್ತು ಪ್ರವಾದಿಗಳ ಬಗ್ಗೆ ಆರೆಸ್ಸೆಸ್ಸಿನ ಬಿಜೆಪಿಯ ಮುಖಂಡರು ಅವಹೇಳನ ಮಾಡುತ್ತಿದ್ದಾರೆ. ಬಿಜೆಪಿ ಸರಕಾರದ ಮೌನವು ಇಂತಹ ಪ್ರಕ್ಷುಬ್ಧತೆಯನ್ನು ಹರಡಲು ಪರೋಕ್ಷವಾಗಿ ಕಾರಣವಾಗಿದೆ ಎಂದು ಹೇಳಿದೆ.
ಹರಿಕೃಷ್ಣ ಬಂಟ್ವಾಳನ ಮೇಲೂ ಆ ಕಾರ್ಯಕ್ರಮದ ಸಂಘಟಕರ ಮೇಲೂ ಕೇಸು ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.
ಮುಸ್ಲಿಮ್ ಸಮುದಾಯ ಮೇಲೆ ದ್ವೇಷ ಹರಡುವ ಹೇಳಿಕೆ ನೀಡಿದ ಹರಿಕೃಷ್ಣ ಬಂಟ್ವಾಳ್ ಮತ್ತು ಕಾರ್ಯಕ್ರಮದ ಸಂಘಟಕರ ಮೇಲೆ ಪೊಲೀಸರು ಕೂಡಲೇ ಸ್ವಯಂಪ್ರೇರಿತ ಪ್ರಕರಣ ದಾಖಲಿಸಬೇಕು. ಮುಸ್ಲಿಮ್ ಸಮುದಾಯದ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಮತ್ತು ಅವರ ಧಾರ್ಮಿಕ ಸಂಸ್ಥೆಗಳನ್ನು ಅವಹೇಳನ ಮಾಡುವ ಕೃತ್ಯಗಳನ್ನು ಗಂಭೀರವಾಗಿ ಪರಿಗಣಿಸದಿದ್ದರೆ, ಸಮುದಾಯದ ಜನರನ್ನು ಜೊತೆಗೂಡಿಸಿಕೊಂಡು ಪ್ರಜಾಸತ್ತಾತ್ಮಕ ಹೋರಾಟವನ್ನು ಸಂಘಟಿಸಬೇಕಾಗುತ್ತದೆ ಎಂದು ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ದ.ಕ.ಕನ್ನಡ ಜಿಲ್ಲಾಧ್ಯಕ್ಷ ಎಚ್ಚರಿಸಿದ್ದಾರೆ.