ಬೀಬಿ ಆಶುರಾ ವುಮೆನ್ಸ್ ಕಾಲೇಜು ವತಿಯಿಂದ ಕಂಪ್ಯೂಟರ್ ಕಲಿತ ವಿದ್ಯಾರ್ಥಿನಿಯರಿಗೆ ಸರ್ಟಿಫಿಕೇಟ್ ವಿತರಣೆ

Prasthutha|

ಮಂಗಳೂರು: ಬೀಬಿ ಆಶುರಾ ವುಮೆನ್ಸ್ ಕಾಲೇಜು ವತಿಯಿಂದ ಕಂಪ್ಯೂಟರ್ ಕಲಿತು ಸಂಪೂರ್ಣಗೊಂಡ ವಿದ್ಯಾರ್ಥಿನಿಯರಿಗೆ ಕಾಲೇಜಿನ ಸ್ಥಾಪಕರಾದ ಸಿದ್ದೀಕ್ ಬೆಂಗ್ರೆ ಅವರು ಸರ್ಟಿಫಿಕೇಟ್ ವಿತರಿಸಿ ಶುಭ ಹಾರೈಸಿದರು.

- Advertisement -

ವಿಶೇಷ ಅಂದರೆ ಇದೇ ಕಾಲೇಜಿನಲ್ಲಿ ಕಲಿತ ಶರೀಅತ್ ವಿದ್ಯಾರ್ಥಿನಿಯರು ಕೂಡ ಶರೀಅತ್ ಜೊತೆಗೆ ಕಂಪ್ಯೂಟರ್ ಕಲಿತು ಸರ್ಟಿಫಿಕೇಟ್ ಪಡೆದುಕೊಂಡರು. ಇದರಲ್ಲಿ ಮೂವರು ವಿದ್ಯಾರ್ಥಿನಿಯರಿಗೆ ಕಾಲೇಜು ವತಿಯಿಂದ ಉದ್ಯೋಗ ದೊರಕಿಸಿ ಕೊಡಲಾಯಿತು.

ಸರ್ಟಿಫಿಕೇಟ್ ವಿತರಣಾ ಕಾರ್ಯಕ್ರಮದಲ್ಲಿ ಕಂಪ್ಯೂಟರ್ ಅಧ್ಯಾಪಕಿ ರೇಷ್ಮಾ, ಶರೀಅತ್ ಅಧ್ಯಾಪಕಿ ಝಿಯಾದ ಮತ್ತು ಕಾಲೇಜಿನ ಎಲ್ಲಾ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಇದು ಕಾಲೇಜಿನ 5ನೇ ಹಾಗೂ ಈ ವರ್ಷದ ಮೊದಲ ಸರ್ಟಿಫಿಕೇಟ್ ವಿತರಣಾ ಕಾರ್ಯಕ್ರಮವಾಗಿದೆ.

Join Whatsapp