ಬಿಹಾರ ಫಲಿತಾಂಶ | ಕಾಂಗ್ರೆಸ್ ನಲ್ಲಿ ಮತ್ತೆ ಬಂಡಾಯದ ಧ್ವನಿ ಮೊಳಗಲಿದೆಯೇ?

Prasthutha|

ನವದೆಹಲಿ : ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದಂತೆ, ಚುನಾವಣೆಯಲ್ಲಿ ಕಳಪೆ ಪ್ರದರ್ಶನ ಪ್ರದರ್ಶಿಸಿರುವ ಕಾಂಗ್ರೆಸ್ ನೊಳಗೆ ಭೀನ್ನಮತೀಯ ಗುಂಪಿನ ಅಸಮಾಧಾನ ಮತ್ತೆ ಹೊರಬಿದ್ದಿದೆ. ನಾಲ್ಕು ತಿಂಗಳ ಹಿಂದೆಯಷ್ಟೇ ಬಂಡಾಯವೆದ್ದಿದ್ದ ಗುಂಪು ಈಗ ಕಾಂಗ್ರೆಸ್ ನಾಯಕತ್ವವನ್ನು ಮತ್ತೊಮ್ಮೆ ಪ್ರಶ್ನಿಸುವುದಕ್ಕೆ ಮುಂದಾಗಿದೆ ಎಂದು ‘ಎನ್ ಡಿಟಿವಿ’ ವರದಿಗಳು ತಿಳಿಸಿವೆ.

- Advertisement -

ಕಾಂಗ್ರೆಸ್ ಪ್ರದರ್ಶನ ಮಹಾಮೈತ್ರಿಕೂಟದ ಆರ್ ಜೆಡಿ ಮತ್ತು ಎಡಪಕ್ಷಗಳನ್ನು ಕೆಳಕ್ಕೆ ಬೀಳಿಸಿದಂತಾಗಿದೆ ಎಂದು ಹಿರಿಯ ನಾಯಕರು ಹೇಳಿರುವುದಾಗಿ ವರದಿ ತಿಳಿಸಿದೆ.

70 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಕೇವಲ 19 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿದೆ. 144 ಸ್ಥಾನಗಳಿಂದ ಸ್ಪರ್ಧಿಸಿದ್ದ ಆರ್ ಜೆಡಿ 75 ಸ್ಥಾನಗಳಲ್ಲಿ ಗೆದ್ದಿದೆ. ಕೇವಲ 19 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಎಡಪಕ್ಷಗಳು 12 ಸ್ಥಾನಗಳಲ್ಲಿ ಗೆದ್ದಿವೆ.

- Advertisement -

ಪಕ್ಷದ ವೈಫಲ್ಯಕ್ಕೆ ನಾಯಕರ ಚುನಾವಣೆ ನಿರ್ವಹಣೆ ಬಗ್ಗೆ ಬಂಡಾಯ ನಾಯಕರು ಗುರಿ ಮಾಡಿ ತೋರಿಸಿದ್ದಾರೆ. “ನಮ್ಮನ್ನು ಪ್ರಚಾರದಿಂದ ಹೊರಗಿಡಲಾಗಿತ್ತು ಮತ್ತು ಬಿಹಾರಕ್ಕೆ ಚುನಾವಣೆ ನಿರ್ವಹಣೆಗೆ ದೆಹಲಿಯಿಂದ ಕಳುಹಿಸಲಾದ ಅಸಮರ್ಥ ವ್ಯಕ್ತಿಗಳು, ಸ್ಥಳೀಯ ನಾಯಕರನ್ನು ಕಡೆಗಣಿಸಿದ್ದಾರೆ ಎಂಬ ಮಾಹಿತಿಗಳು ನಮಗೆ ಬರುತ್ತಿದ್ದವು’’ ಎಂದು ಬಂಡಾಯ ಗುಂಪಿನ ಪ್ರಮುಖರೊಬ್ಬರು ಹೇಳಿದ್ದಾರೆ ಎಂದು ವರದಿ ತಿಳಿಸಿದೆ.

ಚುನಾವಣಾ ಪ್ರಚಾರದಲ್ಲಿ ಪಕ್ಷದ ಮುಖಂಡ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸುವ ಕಾರ್ಯದಲ್ಲಿ ಹೆಚ್ಚು ನಿರತರಾಗಿದ್ದರು. ತೇಜಸ್ವಿ ಯಾದವ್ ಉದ್ಯೋಗ, ಭ್ರಷ್ಟಾಚಾರ ಸೇರಿದಂತೆ ವಿಷಯಾಧಾರಿತ ಮಾತುಗಳನ್ನಾಡುತ್ತಿದ್ದರು. ಹೀಗಾಗಿ ಆರ್ ಜೆಡಿ ಕಳೆದ ಬಾರಿಗಿಂತ 5 ಸ್ಥಾನ ಕಡಿಮೆ ಗೆದ್ದಿದ್ದರೂ, ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

Join Whatsapp