ಬಜೆಟ್ ನಲ್ಲಿ ಆರೋಗ್ಯ, ಶಿಕ್ಷಣ ಕ್ಷೇತ್ರಗಳ ಕಡೆಗಣನೆ: ಕ್ಯಾಂಪಸ್ ಫ್ರಂಟ್ ಟೀಕೆ

Prasthutha|

ಬೆಂಗಳೂರು: 2022-2023ರ ರಾಜ್ಯದ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಆಡಳಿತಾತ್ಮಕ ವಲಯಗಳಲ್ಲಿ ಪ್ರಮುಖವಾದ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳನ್ನೇ ಕಡೆಗಣಿಸಿ, ಜನರಿಗೆ ನಿರಾಶೆ ಮೂಡಿಸಿದ್ದಾರೆ ಎಂದು   ಕ್ಯಾಂಪಸ್ ಫ್ರಂಟ್ ರಾಜ್ಯಾಧ್ಯಕ್ಷ ಅಥಾವುಲ್ಲ ಪುಂಜಾಲಕಟ್ಟೆ ಟೀಕಿಸಿದ್ದಾರೆ.

- Advertisement -

ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಬಜೆಟ್ ನಲ್ಲಿ ನಾಡಿನ ಸರ್ವಾಂಗೀಣ ಅಭಿವೃದ್ಧಿ, ಅಗತ್ಯ ವಸ್ತುಗಳ ಬೆಲೆಗಳ ಇಳಿಕೆ, ಸಾಮಾನ್ಯ ಜನರ ಬದುಕು ಸುಗಮಗೊಳಿಸುವ ಕ್ರಿಯಾಶೀಲ ಯೋಜನೆಗಳು ಜಾರಿಗೆ ಬರಬಹುದೆಂದು ಜನರು ಭರವಸೆ ಇಟ್ಟಿದ್ದರು. ಆದರೆ, ರಾಜ್ಯ ಬಿಜೆಪಿ ಸರಕಾರ ಬಡ, ಮಾಧ್ಯಮ ವರ್ಗಕ್ಕೆ ಅತಿ ಅಗತ್ಯವಾದ ಆರೋಗ್ಯ ಸೇವೆ ಮತ್ತು ಶಿಕ್ಷಣಕ್ಕೆ ಕಡಿಮೆ ಹಣ ಮೀಸಲಿಡುವ ಮೂಲಕ ಈ ವರ್ಗದ ಜನರನ್ನು ನಿರ್ಲಕ್ಷ್ಯಿಸಿದೆ. ಕೋವಿಡ್ ನಿಂದ ಸಂಕಷ್ಟಕ್ಕೆ  ತುತ್ತಾಗಿದ್ದ ಜನರ ಜೀವನ ಸ್ಥಿತಿ ಸುಧಾರಿಸಲು ಬಜೆಟ್ ನಲ್ಲಿ ಯಾವುದೇ ಯೋಜನೆ ಘೋಷಿಸಿಲ್ಲ. ಇದರಿಂದ ಜನರ  ನಿರೀಕ್ಷೆ ಹುಸಿಯಾಗಿದೆ ಎಂದು ಅವರು ಟೀಕಿಸಿದ್ದಾರೆ.

 ಯಾವುದೇ ರೀತಿಯ ಅಭಿವೃದ್ಧಿಗೆ ಪೂರಕವಿಲ್ಲದ, ದೂರದೃಷ್ಟಿ ಇಲ್ಲದ ಮತ್ತು ಜನ ಹಿತ ವಿಲ್ಲದ ಬಜೆಟ್ ಇದಾಗಿದೆ ಎಂದು ರಾಜ್ಯಾಧ್ಯಕ್ಷ ಅಥಾವುಲ್ಲ ಪುಂಜಾಲಕಟ್ಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Join Whatsapp