ಕೊಲ್ಕತ್ತಾ: ಭಾರತೀಯ ಜನಸಂಘದ ಸ್ಥಾಪಕ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಸಾವಿನ ಕುರಿತು ಸುಪ್ರೀಮ್ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿಗಳು ತನಿಖೆ ನಡೆಸಬೇಕೆಂದು ಕೋರಿ ಸಲ್ಲಿಸಿದ ಅರ್ಜಿಯನ್ನು ಕಲ್ಕತ್ತಾ ಹೈಕೋರ್ಟ್ ಇಂದು ವಜಾಗೊಳಿಸಿದೆ.
1953 ರಲ್ಲಿ ನಡೆದ ಸಾವಿನ ಪ್ರಕರಣವನ್ನು ಯಾವುದೇ ದಾಖಲೆಗಳನ್ನು ಒದಗಿಸದೆ ಅಥವಾ ಘಟನೆಗೆ ಪೂರಕವಾದ ಯಾವುದೇ ವ್ಯಕ್ತಿಗಳು ಲಭ್ಯವಿಲ್ಲದಿರುವಾಗ ಘಟನೆಯ 70 ವರ್ಷಗಳ ನಂತದ ಭೇದಿಸುವುದು ಸುಲಭವಲ್ಲ. ಹೀಗಾಗಿ ತನಿಖೆ ನಡೆಸುವುದು ಸೂಕ್ತ ನಿರ್ಧಾರವಲ್ಲ ಎಂದು ಪರಿಗಣಿಸಿ ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಮತ್ತು ನ್ಯಾಯಮೂರ್ತಿ ರಾಜರ್ಷಿ ಭಾರದ್ವಾಜ್ ಅವರನ್ನೊಳಗೊಂಡ ಪೀಠ ತೀರ್ಪು ನೀಡಿದೆ.