ಮಹಿಳಾ ಹೋರಾಟಗಾರ್ತಿಯರನ್ನು ದಮನಿಸುವ ಕುತಂತ್ರ ನಿಲ್ಲಲಿ : ನ್ಯಾಷನಲ್ ವಿಮೆನ್ಸ್ ಫ್ರಂಟ್

Prasthutha|

ಮಂಗಳೂರು : ರೈತ ಹೋರಾಟವನ್ನು ಬೆಂಬಲಿಸಿ  ಟ್ವೀಟ್ ಮಾಡಿದ ಸ್ವೀಡನ್ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್ ಬರ್ಗ್ಗೆ ‘ಟೂಲ್ ಕಿಟ್’ ಒದಗಿಸಿದ ಆರೋಪದ ಮೇಲೆ ಕರ್ನಾಟಕದ ಯುವ ಪರಿಸರ ಹೋರಾಟಗಾರ್ತಿ ದಿಶಾ ರವಿಯನ್ನು ಬಂಧಿಸಿರುವುದು ಪ್ರಜಾಪ್ರಭುತ್ವ ವಿರೋಧಿ ನಡೆ ಮತ್ತು ಸಾಂವಿಧಾನಿಕ ಹಕ್ಕುಗಳ ಹರಣವಾಗಿರುತ್ತದೆ ಎಂದು ನ್ಯಾಷನಲ್ ವಿಮೆನ್ಸ್ ಫ್ರಂಟ್ ರಾಜ್ಯಾಧ್ಯಕ್ಷೆ ಝೀನತ್ ಬಂಟ್ವಾಳರವರು ಆರೋಪಿಸಿದರು.

- Advertisement -

ಸಾಮಾಜಿಕ ಕಾರ್ಯಕರ್ತೆ ನಿಕಿತಾ ಜಾಕಬ್ ಮತ್ತು ಶಂತನುರವರಿಗೆ ಹೊರಡಿಸಿರುವ ಬಂಧನ ವಾರೆಂಟ್ ಕೂಡಾ ಹೋರಾಟಗಾರರನ್ನು ಬೆದರಿಸುವ ಕುತಂತ್ರ ಎಂದು ಅವರು ಹೇಳಿದರು. ಆದ್ದರಿಂದ ದಿಶಾ ರವಿಯನ್ನು ಕೂಡಲೇ ಬಿಡುಗಡೆಗೊಳಿಸಬೇಕು ಹಾಗೂ ಶಂತನು ಮತ್ತು ನಿಕಿತಾ ಜಾಕಬ್ ರವರ ವಿರುದ್ಧ ಹೊರಡಿಸಿರುವ ಬಂಧನ ವಾರೆಂಟ್ ಅನ್ನು ಕೂಡಲೇ ಹಿಂಪಡೆಯಬೇಕೆಂದು ಸರಕಾರಕ್ಕೆ ಆಗ್ರಹಿಸಿದರು.

ಬಿ.ಜೆ.ಪಿ ಸರ್ಕಾರವು ಬಾಲಿವುಡ್ ಮತ್ತು ಕ್ರಿಕೆಟ್ ತಾರೆಯರಿಗೆ ಟೂಲ್ ಕಿಟ್ ನೀಡಿದ ಕೇಸರಿ ಉಗ್ರರನ್ನು ಬಂಧಿಸದೆ ರೈತರ ಹಕ್ಕುಗಳನ್ನು ಸಂರಕ್ಷಿಸುವ ಟೂಲ್ ಕಿಟ್ ನೀಡಿದ ದಿಶಾ ರವಿಯನ್ನು ಬಂಧಿಸಿರುವುದು ಸರ್ವಾಧಿಕಾರದ ಪರಮಾವಧಿಯಾಗಿದೆ. ಅಲ್ಲದೇ ರೈತರ ಪ್ರತಿಭಟನೆಯನ್ನು ದಿಶಾ ರವಿ ಈಗಾಗಲೇ ಬೆಂಬಲಿಸುತ್ತಿದ್ದರು, ಆದ್ದರಿಂದಲೇ ಸರ್ಕಾರವು ಆಕೆಯನ್ನು ಗುರಿಯಾಗಿಸಿಕೊಂಡಿದೆ. ಇದು ಹೋರಾಟದ ಧ್ವನಿಯನ್ನು ಮೌನಗೊಳಿಸುವ ಹುನ್ನಾರವಾಗಿದ್ದು, ಜಾತ್ಯತೀತ ಮೌಲ್ಯಗಳ ಪರ ನಿಲ್ಲಬೇಕಾದ ಸರ್ಕಾರ, ಇಂದು ಬಂಡವಾಳ ಶಾಹಿಗಳು ಮತ್ತು ಫ್ಯಾಸಿಸ್ಟರ ಪರವಾಗಿ ಕೆಲಸ ಮಾಡುತ್ತಿದೆ ಎಂದು ಅವರು ತಿಳಿಸಿದರು. 

- Advertisement -

ಅಲ್ಪಸಂಖ್ಯಾತರು, ರೈತರು ಮತ್ತು ಕಾರ್ಮಿಕ ವಿರೋಧಿ ಕಾನೂನುಗಳನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕು ಮತ್ತು ಅಕ್ರಮ ಬಂಧನಗಳನ್ನು ಕೂಡಲೇ ನಿಲ್ಲಿಸಬೇಕು ಮತ್ತು  ಬಂಧಿತರನ್ನು ಕೂಡಲೇ ಬಿಡುಗೊಳಿಸುವಂತೆ ನ್ಯಾಷನಲ್ ವಿಮೆನ್ಸ್ ಫ್ರಂಟ್ ಆಗ್ರಹಿಸುತ್ತದೆ ಎಂದು ಅವರು ಹೇಳಿದರು.



Join Whatsapp