ಅಭಿವೃದ್ಧಿ ವಿಷಯವನ್ನು ಮುಂದಿಟ್ಟು ಚರ್ಚೆ ಮಾಡಿ: ಭರತ್ ಶೆಟ್ಟಿಯ ‘ಬಾವಲಿ ತಿರುಗಾಟ’ ಹೇಳಿಕೆಗೆ ತಿರುಗೇಟು ನೀಡಿದ ಇನಾಯತ್ ಅಲಿ

Prasthutha|

ಮಂಗಳೂರು: ಶಾಸಕ ಭರತ್ ಶೆಟ್ಟಿಯವರ ‘ಬಾವಲಿ ತಿರುಗಾಟ’ ಹೇಳಿಕೆಗೆ ತಿರುಗೇಟು ನೀಡಿರುವ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಹೇಳಿಕೊಳ್ಳುವಂತಹ ಯಾವುದೇ ಅಭಿವೃದ್ಧಿ ಕಾರ್ಯ ಭರತ್ ಶೆಟ್ಟಿ ಅವರ ಅಧಿಕಾರಾವಧಿಯಲ್ಲಿ ಆಗಿಲ್ಲ. ಇದರಿಂದ ಜನರ ಮನಸ್ಸನ್ನು ಬೇರೆಡೆ ತಿರುಗಿಸಲು ಇಲ್ಲಸಲ್ಲದ ಹೇಳಿಕೆ ನೀಡುತ್ತಿದ್ದಾರೆ ಎಂದು ಕುಟುಕಿದ್ದಾರೆ.

- Advertisement -


ಮಂಗಳೂರು ಉತ್ತರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಗುರುಪುರ ಮತ್ತು ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ವತಿಯಿಂದ ಮಂಗಳವಾರ ಕೈಕಂಬದ ಝರಾ ಕನ್ವೆನ್ಶನ್ ಹಾಲ್’ನಲ್ಲಿ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡಿದರು.


ಶಾಸಕ ಭರತ್ ಶೆಟ್ಟಿಯವರು ಇತ್ತೀಚೆಗೆ ಕ್ಷೇತ್ರದಲ್ಲಿ ‘ಬಾವಲಿ ತಿರುಗಾಟ’ ಜೋರಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ಇದು ಅವರ ಹತಾಶೆಯ ಹೇಳಿಕೆಯಾಗಿದೆ. ಸರ್ವೇ ಜನಾಃ ಸುಖಿನೋಭವಂತು ಎಂಬ ಧರ್ಮದಲ್ಲಿ ಹುಟ್ಟಿರುವ ಭರತ್ ಶೆಟ್ಟಿಯವರೇ. ನಿನ್ನ ಧರ್ಮವನ್ನು ಪಾಲನೆ ಮಾಡು ಇನ್ನೊಬ್ಬರ ಧರ್ಮವನ್ನು ಗೌರವಿಸು ಎಂದು ನನ್ನ ಧರ್ಮ ನನಗೆ ಹೇಳಿಕೊಟ್ಟಿದೆ. ಅದನ್ನು ನಾನು ಪಾಲನೆ ಮಾಡುತ್ತಿದ್ದೇನೆ. ಕಾಂಗ್ರೆಸ್ ಸಭೆ ಇರಲಿ ಸಾರ್ವಜನಿಕ ಕಾರ್ಯಕ್ರಮವಿರಲಿ ಅಲ್ಲಿಗೆ ಹೋದಾಗ ಅಲ್ಲಿರುವ ಜನರು ನೀನು ಮುಸ್ಲಿಮನೋ, ಬಿಲ್ಲವನೋ, ಬಂಟನೋ ಎಂದು ಕೇಳದೆ ಸಹೋದರನಂತೆ ಕಾಣುತ್ತಾ ಇದ್ದಾರೆ. ಇದನ್ನೆಲ್ಲ ನೋಡಿ ಹೊಟ್ಟೆ ಉರಿಯುತ್ತದೆ. ಚುನಾವಣೆ ಬಂದಾಗ ವೋಟಿಗಾಗಿ ಏನೇನೋ ನಾಟಕ ಮಾಡ್ತಾ ಇದ್ದೀರಿ. ನಾಚಿಕೆ ಆಗ್ಬೇಕು ನಿಮಗೆ ಇದನ್ನೆಲ್ಲಾ ನಿಲ್ಲಿಸಿ ನೀವು ಮಾಡಿದ ಅಭಿವೃದ್ಧಿಯ ಬಗ್ಗೆ ಮಾತಾಡಿ, ಈಶ್ವರಪ್ಪ ಏನೇನೋ ಮಾತಾಡ್ತಾ ಇರ್ತಾರೆ, ಅದರ ಬಗ್ಗೆ ತಲೆಕೆಡಿಕೊಳ್ಳಬೇಡಿ. ಅವರ ಮಾತು ಕೇಳಿ ಗುತ್ತಿಗೆದಾರ ಸುಸೈಡ್ ಮಾಡ್ಕೊಂಡ, ಅಂಥವರ ಮಾತು ಕೇಳಬೇಡಿ’ ಎಂದರು.

- Advertisement -


ವೇದಿಕೆಯಲ್ಲಿ ರಾಜ್ಯ ವಿಧಾನಸಭೆಯ ವಿಪಕ್ಷ ಉಪ ನಾಯಕ ಯು.ಟಿ.ಖಾದರ್, ಕೆಪಿಸಿಸಿ ಅಲ್ಪಸಂಖ್ಯಾತ ಘಟಕ ರಾಜ್ಯಾಧ್ಯಕ್ಷ ಅಬ್ದುಲ್ ಜಬ್ಬಾರ್, ಮಾಜಿ ಶಾಸಕರಾದ ಮೊಯ್ದಿನ್ ಬಾವ, ಎಐಸಿಸಿ ಅಲ್ಪಸಂಖ್ಯಾತ ಘಟಕ ಸಂಯೋಜಕಿ ಜೀನಲ್ ಗಾಲಾ, ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿಸೋಜ, ಕೆಪಿಸಿಸಿ ಅಲ್ಪಸಂಖ್ಯಾತ ಘಟಕ ಉಪಾಧ್ಯಕ್ಷ ಮುದಬ್ಬರ್ ಅಹ್ಮದ್ ಖಾನ್, ಕೆಪಿಸಿಸಿ ಅಲ್ಪಸಂಖ್ಯಾತ ಘಟಕ ಪ್ರಧಾನ ಕಾರ್ಯದರ್ಶಿಗಳಾದ ಇರ್ಷಾದ್ ಅಹ್ಮದ್ ಶೇಖ್, ಮುಹಮ್ಮದ್ ಸಿರಾಜ್, ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉಮೇಶ್ ದಂಡಕೇರಿ, ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ ಕಂಬಳಿ, ಜಲೀಲ್ ಬದ್ರಿಯಾ, ಸೈಯದ್ ಇಮ್ರಾನ್, ಮಂಗಳೂರು ಉತ್ತರ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಮೀರ್ ಕಾಟಿಪಳ್ಳ, ಗಿರೀಶ್ ಆಳ್ವ, ಶಾಹುಲ್ ಹಮೀದ್ ಉಪಸ್ಥಿತರಿದ್ದರು.



Join Whatsapp