ನವದೆಹಲಿ: ಟೀಮ್ ಇಂಡಿಯಾದ ಅನುಭವಿ ವಿಕೆಟ್ ಕೀಪರ್, ಬ್ಯಾಟ್‌ಮನ್ ಹಾಗೂ ಐಪಿಎಲ್‌ನಲ್ಲಿ ಆರ್‌ಸಿಬಿಯ ಸ್ಟಾರ್ ಪ್ಲೇಯರ್ ಆಗಿದ್ದ ದಿನೇಶ್ ಕಾರ್ತಿಕ್(39) ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ರಾಜಸ್ಥಾನ ವಿರುದ್ಧ ಎಲಿಮಿನೇಟರ್ ಪಂದ್ಯದಲ್ಲಿ ಸೋಲು ಕಂಡ 10 ದಿನಗಳ ಬಳಿಕ ಅವರು ಈ ನಿರ್ಧಾರ ಪ್ರಕಟಿಸಿದ್ದಾರೆ.
ಈ ಕುರಿತಾದ ಮಾಹಿತಿಯನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನಾನು ಅಧಿಕೃತವಾಗಿ ನನ್ನ ನಿವೃತ್ತಿಯನ್ನು ಘೋಷಿಸುತ್ತೇನೆ. ಆಟದ ದಿನಗಳನ್ನು ನನ್ನ ಹಿಂದೆ ಇಡುತ್ತೇನೆ. ಈ ಸಂದರ್ಭದಲ್ಲಿ ನಾನು ನನ್ನ ಎಲ್ಲಾ ಕೋಚ್‌ಗಳು, ನಾಯಕ, ತಂಡದ ಸಹ ಆಟಗಾರರು, ಆಯ್ಕೆದಾರರು ಮತ್ತು ಸಹಾಯಕ ಸಿಬ್ಬಂದಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಭಾರತ ತಂಡದಲ್ಲಿ ಆಡುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಎಂದು ಭಾವಿಸುತ್ತೇನೆ. ನನ್ನ ತಂದೆ-ತಾಯಿ ಸದಾ ತನಗೆ ಶಕ್ತಿ ನೀಡುತ್ತಿದ್ದರು. ಅವರಿಲ್ಲದಿದ್ದರೆ ತಾನು ಈ ಹಂತಕ್ಕೆ ಬರುತ್ತಿರಲಿಲ್ಲ. ನನ್ನ ವೃತ್ತಿಜೀವನಕ್ಕೆ ಬೆನ್ನೇಲುಬಾಗಿ ನಿಲ್ಲಲು ತನ್ನ ವೃತ್ತಿಜೀವನವನ್ನು ಸ್ಥಗಿತಗೊಳಿಸಿದ ಪತ್ನಿ ದೀಪಿಕಾ ಪಳ್ಳಿಕಲ್ ಅವರಿಗೂ ದಿನೇಶ್ ಧನ್ಯವಾದ ಎಂದು ಅವರು ಬರೆದುಕೊಂಡಿದ್ದಾರೆ.
ದಿನೇಶ್ ಕಾರ್ತಿಕ್ 2007ರಲ್ಲಿ ಟಿ20 ವಿಶ್ವಕಪ್ ಹಾಗೂ 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ ತಂಡದ ಸದಸ್ಯರಾಗಿದ್ದರು. ಇದಲ್ಲದೇ 2010 ಮತ್ತು 2018ರಲ್ಲಿ ಭಾರತ ತಂಡ ಏಷ್ಯಾಕಪ್ ಗೆದ್ದ ಟೀಂ ಇಂಡಿಯಾದ ಯಶಸ್ಸಿನಲ್ಲಿ ಡಿಕೆ ಪ್ರಮುಖರಾಗಿದ್ದರು. ಅಲ್ಲದೆ, ಐಪಿಎಲ್‌ನಲ್ಲಿ ಸಹ ಅನೇಕ ತಂಡದ ಯಶಸ್ಸಿನಲ್ಲಿ ಪ್ರಮಯಖರಾಗಿದ್ದರು. ಕಾರ್ತಿಕ್ ಕೊನೆಯ ಬಾರಿಗೆ ಐಪಿಎಲ್ ಲೀಗ್‌ನಲ್ಲಿ ಮೇ ತಿಂಗಳಲ್ಲಿ ರಾಯಲ್ ಬೆಂಗಳೂರು ಪರ ಆಡಿದ್ದರು.