ದಿಗ್ವಿಜಯ್ ಸಿಂಗ್ ಹೇಳಿಕೆಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ: ರಾಹುಲ್ ಗಾಂಧಿ

Prasthutha|

ಶ್ರೀನಗರ: ದಿಗ್ವಿಜಯ್ ಸಿಂಗ್ ಅವರ ಅಭಿಪ್ರಾಯಗಳೊಂದಿಗೆ ಪಕ್ಷಕ್ಕೆ ಯಾವುದೇ ಸಂಬಂಧವಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.


ಸದ್ಯ ಭಾರತ್ ಜೋಡೋ ಯಾತ್ರೆಯ ನಿಮಿತ್ತ ಜಮ್ಮು-ಕಾಶ್ಮೀರದಲ್ಲಿರುವ ರಾಹುಲ್ ಗಾಂಧಿ ಭಾರತೀಯ ಸೈನ್ಯ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಕುರಿತ ದಿಗ್ವಿಜಯ್ ಸಿಂಗ್ ಹೇಳಿಕೆಯನ್ನು ಖಂಡಿಸಿದ್ದಾರೆ.

- Advertisement -

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಿಗ್ವಿಜಯ್ ಅವರ ಹೇಳಿಕೆಗಳು ವೈಯಕ್ತಿಕವಾಗಿದ್ದು, ಪಕ್ಷದ ಪರವಾಗಿ ಅವರ ಅಭಿಪ್ರಾಯವನ್ನು ನಾವು ಮೆಚ್ಚುವುದಿಲ್ಲ ಅವರ ಅಭಿಪ್ರಾಯಗಳೊಂದಿಗೆ ಪಕ್ಷಕ್ಕೆ ಯಾವುದೇ ಸಂಬಂಧವಿಲ್ಲ. ಪಕ್ಷದ ಅಭಿಪ್ರಾಯಗಳು ಚರ್ಚೆಯ ಮೂಲಕ ಹೊರಬರುತ್ತವೆ ಎಂದು ಹೇಳಿದರು.


ಭಾರತೀಯ ಸಶಸ್ತ್ರ ಪಡೆಗಳ ಸಾಮರ್ಥ್ಯ ನಮಗೆ ತಿಳಿದಿದೆ. ಅವರು ಅಸಾಧಾರಣ ಸಂದರ್ಭಗಳಲ್ಲಿಯೂ ತಮ್ಮ ಕರ್ತವ್ಯಗಳನ್ನು ನಿರ್ವಹಿಸುತ್ತಾರೆ ಎಂದು ನಾವು ನಂಬುತ್ತೇವೆ. ಅವರು ಯಾವುದೇ ಪುರಾವೆಗಳನ್ನು ತೋರಿಸುವ ಅಗತ್ಯವಿಲ್ಲ ಎಂದು ರಾಹುಲ್ ಗಾಂಧಿ ಹೇಳಿದರು.

- Advertisement -