ಸರ್ಜಿಕಲ್ ಸ್ಟ್ರೈಕ್’ನಲ್ಲಿ ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂಬುದಕ್ಕೆ ಪುರಾವೆಗಳಿಲ್ಲ: ದಿಗ್ವಿಜಯ್ ಸಿಂಗ್

Prasthutha|

►‘ಕೇಂದ್ರ ಸರ್ಕಾರ ಸುಳ್ಳಿನ ಕಂತೆ ಕಟ್ಟಿಕೊಳ್ಳುವ ಮೂಲಕ ಆಡಳಿತ ನಡೆಸುತ್ತಿದೆ’

- Advertisement -

ಜಮ್ಮು/ನವದೆಹಲಿ: ಸರ್ಜಿಕಲ್ ಸ್ಟ್ರೈಕ್’ನಲ್ಲಿ ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂಬುದಕ್ಕೆ ಪುರಾವೆಗಳಿಲ್ಲ. ಕೇಂದ್ರ ಸರ್ಕಾರವು ಈ ಕುರಿತು ಸುಳ್ಳು ಹೇಳುತ್ತಿದೆ ಎಂದು ಕಾಂಗ್ರೆಸ್ ಮುಖಂಡ ದಿಗ್ವಿಜಯ್ ಸಿಂಗ್ ಆರೋಪಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತ್ ಜೋಡೊ ಯಾತ್ರೆಯ ಅಂಗವಾಗಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರವು ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಮಾತನಾಡುತ್ತಿದೆ. ಈ ದಾಳಿಯಲ್ಲಿ ಹಲವು ಮಂದಿ ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದೂ ಹೇಳಿದೆ. ಆದರೆ ಇದಕ್ಕೆ ಯಾವುದೇ ಪುರಾವೆಗಳನ್ನು ನೀಡಿಲ್ಲ. ಅವರು ಸುಳ್ಳಿನ ಕಂತೆ ಕಟ್ಟಿಕೊಳ್ಳುವ ಮೂಲಕ ಆಡಳಿತ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ, ‘ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿನ ದ್ವೇಷದಿಂದ ಕಾಂಗ್ರೆಸ್ ಪಕ್ಷವು ಸಶಸ್ತ್ರ ಪಡೆಗಳನ್ನು ಅಪಮಾನಿಸುತ್ತಿದೆ. ಸಶಸ್ತ್ರ ಪಡೆಗಳನ್ನು ಅಪಮಾನಿಸುವುದನ್ನು ಭಾರತವು ಎಂದಿಗೂ ಸಹಿಸದು ಎಂದು ಹೇಳಿದೆ.

Join Whatsapp