ಬೆಂಗಳೂರು : ಗೂಗಲ್ ಪ್ಲೇ ಸ್ಟೋರ್ ಸರ್ಚ್ ಆಪ್ಶನ್ ನಲ್ಲಿ ‘ದಿಗ್ವಿಜಯ’ ನ್ಯೂಸ್ ಚಾನೆಲ್ ಹೊರ ಹಾಕಲ್ಪಟ್ಟಿದೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇತ್ತೀಚೆಗೆ ದ.ಕ. ಜಿಲ್ಲೆಯ ಬೆಳ್ತಂಗಡಿಯ ಉಜಿರೆಯಲ್ಲಿ ‘ಪಾಕಿಸ್ತಾನ ಪರ’ ಘೋಷಣೆ ಕೂಗಿದ ಪ್ರಕರಣಕ್ಕೆ ಸಂಬಂಧಿಸಿ, ಎಸ್ ಡಿಪಿಐ ಕಾರ್ಯಕರ್ತರನ್ನು ಗುರಿಯಾಗಿಸಿ ‘ದಿಗ್ವಿಜಯ’ ನ್ಯೂಸ್ ವರದಿ ಮಾಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ ಎನ್ನಲಾಗುತ್ತಿದೆ.
ಆದರೆ, ಇದು ತಾಂತ್ರಿಕ ದೋಷವೋ? ಅಥವಾ ಉಜಿರೆ ಘಟನೆ ನಂತರದ ಬೆಳವಣಿಗೆಯೋ ಎಂಬುದು ಸ್ಪಷ್ಟವಾಗಿಲ್ಲ.
ದೊಡ್ಡ ಮಟ್ಟದಲ್ಲಿ ‘ದಿಗ್ವಿಜಯ’ ನ್ಯೂಸ್ appನ ರೇಟಿಂಗ್ ಏಕಾಏಕಿ ಕುಸಿದಿದ್ದು, ಕೆಲವೇ ದಿನಗಳ ಹಿಂದೆ 4.2ರಷ್ಟಿದ್ದ ರೇಟಿಂಗ್, ಈಗ 1.0ಗೆ ಇಳಿಕೆಯಾಗಿದೆ ಎನ್ನಲಾಗಿದೆ. ಇದೀಗ ಗೂಗಲ್ ಪ್ಲೇಸ್ಟೋರ್ ನಲ್ಲಿ ‘ದಿಗ್ವಿಜಯ’ ನ್ಯೂಸ್ app ಸರ್ಚ್ ಕೊಟ್ಟರೆ, ಅದರ ಲಿಂಕ್ ಲಭ್ಯವಿರುವುದಿಲ್ಲ ಎಂದು ಹೇಳಲಾಗಿದೆ.