ದಿಗ್ವಿಜಯ್ ಸಿಂಗ್ ಹೆಸರು ‘ದಿಗ್ವಿಜನ್ ಖಾನ್’ಎಂದು ಬದಲಾಯಿಸಿಕೊಳ್ಳಲಿ: ಬಿಜೆಪಿ

Prasthutha|

ನವದೆಹಲಿ: ‘ಬೀಫ್ ತಿನ್ನುವುದನ್ನು ಸಮರ್ಥಿಸುವುದಾದರೆ ಕಾಂಗ್ರೆಸ್’ನ ಹಿರಿಯ ನೇತಾರ ದಿಗ್ವಿಜಯ್ ಸಿಂಗ್ ಅವರು ತಮ್ಮ ಹೆಸರನ್ನು ದಿಗ್ವಿಜಯ್ ಖಾನ್ ಎಂದು ಬದಲಾಯಿಸಿಕೊಳ್ಳಬೇಕು ಎಂದು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಕೈಲಾಶ್ ವಿಜಯ್’ವರ್ಗಿಯ ಹೇಳಿದ್ದಾರೆ.

- Advertisement -

ಸಾವರ್ಕರ್ ಕುರಿತ ದಿಗ್ವಿಜಯ್ ಸಿಂಗ್ ಹೇಳಿಕೆಯ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಕೈಲಾಶ್ ವಿಜಯ್’ವರ್ಗಿಯ ದಿಗ್ವಿಜಯ್ ಸಿಂಗ್ ವಿರುದ್ದ ವಾಗ್ದಾಳಿ ನಡಸಿದ್ದಾರೆ.

‘ ಸಾವರ್ಕರ್ ತನ್ನ ಪುಸ್ತಕದಲ್ಲಿ ಗೋವನ್ನು ‘ಗೋಮಾತ’ಎಂದು ಪರಿಗಣಿಸಿಲ್ಲ. ಜೊತೆಗೆ ಗೋಮಾಂಸ ತಿನ್ನುವುದರ ಕುರಿತು ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ. ಸಾವರ್ಕರ್ ಪ್ರಕಾರ ಹಿಂದುತ್ವಕ್ಕೂ ಹಿಂದೂಯಿಸಂಗೂ ಯಾವುದೇ ಸಂಬಂಧವಿಲ್ಲ’ಎಂದು ದಿಗ್ವಿಜಯ್ ಸಿಂಗ್ ಶನಿವಾರ ಹೇಳಿಕೆ ನೀಡಿದ್ದರು.

- Advertisement -

2024ರಲ್ಲಿ ಬಿಜೆಪಿ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಅವರು ಸಂವಿಧಾನವನ್ನು ಬದಲಾಯಿಸುತ್ತಾರೆ ಜೊತೆಗೆ ಮೀಸಲಾತಿ ಪದ್ಧತಿಯನ್ನು ರದ್ದುಮಾಡುತ್ತಾರೆ ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದರು. ದಿಗ್ವಿಜಯ್ ಸಿಂಗ್ ಏನು ಬೇಕಾದರೂ ಮಾತನಾಡಬಹುದು, ಏಕೆಂದರೆ ಅವರೊಬ್ಬ ನಿವೃತ್ತಿಯ ಅಂಚಿನಲ್ಲಿರುವ ರಾಜಕಾರಣಿ ಎಂದು ಕೈಲಾಶ್ ವಿಜಯ್’ವರ್ಗಿಯ ವ್ಯಂಗ್ಯವಾಡಿದ್ದಾರೆ.

Join Whatsapp