ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಡಿಐಜಿ; ವಿಡಿಯೋ ವೈರಲ್

Prasthutha|

ಪಣಜಿ: ಆರೋಗ್ಯ ಸರಿಯಿಲ್ಲ ಎಂದು ರಜೆ ಪಡೆದು ಪಬ್‍ಗೆ ಹೋಗಿ ಕಂಠಪೂರ್ತಿ ಕುಡಿದು ಉನ್ನತ ಪೋಲಿಸ್ ಅಧಿಕಾರಿಯೊಬ್ಬರು ಯುವತಿಗೆ ಲೈಂಗಿಕ ಕಿರುಕುಳ ನೀಡಿರುವ ಪ್ರಕರಣ ಗೋವಾದ ಬಾಗಾಟದಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.

- Advertisement -

ಎ ಕೋನ್ ಎಂದು ಗುರುತಿಸಲ್ಪಡುವ ಡಿಐಜಿ ಈ ಹಿಂದೆ ದೆಹಲಿ ಪೋಲಿಸ್ ಇಲಾಖೆಯಲ್ಲಿ ಉನ್ನತ ಹುದ್ಧೆಯಲ್ಲಿದ್ದರು ಎಂದು ವರದಿಯಾಗಿದ್ದು, ಇವರು ಗೋವಾದ ಬಾಗಾದಲ್ಲಿ ಕುಡಿದ ಅಮಲಿನಲ್ಲಿ ಯುವತಿಗೆ ಕಿರುಕುಳ ನೀಡಿದ್ದಾರೆ ಎಂದು ದೂರು ನೀಡಲಾಗಿದೆ. ಘಟನೆಯ ಸಮಯದಲ್ಲಿ ಎ ಕೋನ್ ರವರು ಕುಡಿದ ಅಮಲಿನಲ್ಲಿದ್ದರು ಎನ್ನಲಾಗಿದೆ. ಅವರು ಕ್ಲಬ್‍ನಲ್ಲಿ ಯುವತಿಯೊಂದಿಗೆ ಜಗಳವಾಡಿ ಅನುಚಿತವಾಗಿ ವರ್ತಿಸಿದರು ಎನ್ನಲಾಗಿದೆ.

ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಡಿಐಜಿ ಮಹಿಳೆಯೊಂದಿಗೆ ಮಾತಿನ ಚಕಮಕಿಯಲ್ಲಿ ತೊಡಗಿರುವುದು ಕೂಡ ಕಾಣಬಹುದಾಗಿದೆ. ಮಹಿಳೆ ಪೋಲಿಸರಿಗೆ ಕಪಾಳಮೋಕ್ಷ ಮಾಡಿದ ಬಳಿಕ ಗಲಾಟೆ ನಡೆದಿದೆ. ಡಿಐಜಿ ರವರು ಘಟನೆಯ ಸಂದರ್ಭದಲ್ಲಿ ವೈದ್ಯಕೀಯ ರಜೆಯಲ್ಲಿದ್ದರು ಎನ್ನಲಾಗಿದೆ.

- Advertisement -

ಈ ಘಟನೆಯ ಮಾಹಿತಿ ಪಡೆದ ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ್ ಸಂಬಂಧಿತ ಅಧಿಕಾರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಗೋವಾ ವಿಧಾನಸಭೆ ಅಧಿವೇಶನದಲ್ಲಿ ಈ ವಿಷಯ ಚರ್ಚೆಗೆ ಬಂದಿದ್ದು, ಪೋಲಿಸ್ ಅಧಿಕಾರಿಯನ್ನು ಸಸ್ಪೆಂಡ್ ಮಾಡಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.

Join Whatsapp