ಮಲ್ಪೆ: ಎಸ್ ಡಿಪಿಐ ಸೇರ್ಪಡೆಗೊಂಡ ವಿವಿಧ ಪಕ್ಷಗಳ ಮುಖಂಡರು

Prasthutha|

ಉಡುಪಿ, ಜು.28: ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಪಕ್ಷಗಳ ಮುಖಂಡರು, ಕಾರ್ಯಕರ್ತರು ಮಲ್ಪೆಯಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಎಸ್.ಡಿ.ಪಿ.ಐ ಪಕ್ಷಕ್ಕೆ ಸೇರ್ಪಡೆಗೊಂಡರು. ಎಸ್ ಡಿಪಿಐ ಜಿಲ್ಲಾಧ್ಯಕ್ಷ ಇಲ್ಯಾಸ್ ಸಸ್ತಾನ ಮುಖಂಡರನ್ನು ಎಸ್. ಡಿ. ಪಿ. ಐ. ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿ, ಜಾತ್ಯತೀತ ಸಿದ್ಧಾಂತದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಕೆಲವು ಪಕ್ಷಗಳು ನಂತರ ಕೋಮುವಾದಿ ನಿಲುವಿಗೆ ಜೋತು ಬೀಳುತ್ತಿವೆ. ಮಾತ್ರವಲ್ಲ ಅಲ್ಪಸಂಖ್ಯಾತರು, ದಲಿತರು, ಮತ್ತು ಹಿಂದುಳಿದ ವರ್ಗಗಳಿಗೆ ಮಾರಕವಾಗುವ ಕಾನೂನುಗಳನ್ನು ಜಾರಿಗೆ ತಂದು ಅವರ ಮೂಲಭೂತ ಹಕ್ಕುಗಳನ್ನು ಕಸಿಯುತ್ತಿವೆ. ಇದರಿಂದ ಬೇಸತ್ತ ವಿವಿಧ ಪಕ್ಷಗಳ ಮುಖಂಡರು ಇಂದು ನಿಜವಾದ ಜಾತ್ಯತೀತ ಪಕ್ಷವಾದ ಎಸ್ ಡಿಪಿಐಗೆ ಸೇರ್ಪಡೆಗೊಂಡಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.

- Advertisement -

ಪ್ರಾಸ್ತವಿಕವಾಗಿ ಉಡುಪಿ ಜಿಲ್ಲಾ ಸಮಿತಿ ಸದಸ್ಯ ಅಬ್ದುಲ್ ವಾಹಿದ್ ಕುಂದಾಪುರ ಮಾತಾಡಿದರು. ಎಸ್. ಡಿ. ಪಿ. ಐ ಮುಖಂಡರಾದ ಶಾಹಿದ್ ಅಲಿ ಹಾಗೂ ಶಂಸುದ್ದಿನ್ ಉಡುಪಿ ಪಕ್ಷದ ಸಿದ್ಧಾಂತ ಮತ್ತು ಕಾರ್ಯಕ್ರಮಗಳ ಬಗ್ಗೆ ಮಾತನಾಡಿದರು.
ಈ ಸಂದರ್ಭದಲ್ಲಿ ಶುಕುರ್ ಮಲ್ಪೆ ಉಪಸ್ಥಿತರಿದ್ದರು.

Join Whatsapp