ಭಾರತ್ ಜೋಡೋ ಯಾತ್ರೆ ತಡೆಯಲು ಕೋವಿಡ್ ಬಿಟ್ಟಿದ್ದೀರಾ: ಶಿವಸೇನೆ ಪ್ರಶ್ನೆ

Prasthutha|

►ಟ್ರಂಪ್’ರನ್ನು ಕರೆಸಿ ಕೋವಿಡ್ ಹರಡಿದವರು ಯಾರು

- Advertisement -

►ಭಾರತ್ ಜೋಡೋ ಯಾತ್ರೆಯ ಬಿರುಗಾಳಿಗೆ ತತ್ತರಿಸಿದ ಕೇಂದ್ರ

►ಈಗಿನ ಕೋರೋನಾ ರಾಜಕೀಯ ಪ್ರೇರಿತ

- Advertisement -

►ಮೋದಿ ಜಾಥಾ ನಡೆಸುವಾಗ ಕೋವಿಡ್ ಇರಲಿಲ್ಲವೇ?


ಮುಂಬೈ: ಶಿವಸೇನೆಯ ಮುಖವಾಣಿ ಸಾಮ್ನಾ ಪತ್ರಿಕೆಯ ಸಂಪಾದಕೀಯದಲ್ಲಿ ಕೇಂದ್ರದ ಮೋದಿ ಸರಕಾರವನ್ನು ತೀವ್ರವಾಗಿ ಶಿವಸೇನೆಯು ಟೀಕಿಸಿದೆ.


ಮೂರು ವರ್ಷಗಳ ಹಿಂದೆ ಟ್ರಂಪ್’ರನ್ನು ಕರೆಸಿ ಗುಜರಾತಿನಲ್ಲಿ ಮೆರೆಸಿ ಕೋವಿಡ್ ಹರಡಿದಿರಿ. ಈಗ ಭಾರತ್ ಜೋಡೋ ಯಾತ್ರೆಯನ್ನು ತಡೆಯಲು ಕೊರೋನಾ ಬಿಡುಗಡೆ ಮಾಡಿದ್ದೀರಿ ಎಂದು ಶಿವಸೇನೆಯು ಒಕ್ಕೂಟ ಸರಕಾರದ ಮೇಲೆ ಗಂಭೀರ ಆರೋಪ ಮಾಡಿದೆ.


ದೇಶದ ಎಲ್ಲ ಸರಕಾರಗಳೂ ಎಲ್ಲ ಬಗೆಯ ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಮೋದಿ ಸರಕಾರವು ಹೇಳಿದ ಸಮಯದಲ್ಲಿ ಶಿವಸೇನೆಯ ಉದ್ಧವ್ ಠಾಕ್ರೆಯವರು ಭಾರತ್ ಜೋಡೋ ಯಾತ್ರೆ ತಡೆಯಲು ಕೋವಿಡ್ ಬಿಟ್ಟಿದ್ದೀರಾ ಎಂಬ ಆರೋಪ ಮಾಡಿದ್ದಾರೆ.
ಭಾರತ್ ಜೋಡೋ ಯಾತ್ರೆ ಮುಂದುವರಿಸಲು ಕೊರೋನಾ ನಿಯಮಾವಳಿ ಪಾಲಿಸುವಂತೆ ಕೇಂದ್ರದ ಆರೋಗ್ಯ ಮಂತ್ರಿ ಮನ್ಸುಖ್ ಮಾಂಡವೀಯರು ರಾಹುಲ್ ಗಾಂಧಿ, ಅಶೋಕ್ ಗೆಹ್ಲೋಟ್ ರಿಗೆ ಪತ್ರ ಬರೆದಿದ್ದರು.


ಆದರೆ ಆ ಪತ್ರವನ್ನು ಕಾಂಗ್ರೆಸ್ ಮಾತ್ರವಲ್ಲ, ಪ್ರತಿಪಕ್ಷಗಳ ಯಾರೂ ಸಕಾರಾತ್ಮಕವಾಗಿ ಸ್ವೀಕರಿಸಿಲ್ಲ. ಯಾಕೆ ನಿಮಗೆ ಬೇಡವಾದ ಯಾತ್ರೆಗೆ ಮಾತ್ರ ತಡೆ ಎಂದು ಅವರು ಕೇಂದ್ರ ಸರಕಾರವನ್ನು ಚುಚ್ಚಿದ್ದರು. ಶಿವಸೇನೆಯ ಸಾಮ್ನಾ ಪತ್ರಿಕೆಯು ಕೇಂದ್ರವನ್ನು ಖಂಡಿಸಿ ಸಂಪಾದಕೀಯವನ್ನೇ ಬರೆದಿದೆ. ಭಾರತ್ ಜೋಡೋ ಯಾತ್ರೆ 100 ದಿನ ದಾಟಿದ್ದು, ಎಲ್ಲೆಡೆ ರಾಹುಲ್ ಗಾಂಧಿಯವರು ಜನಪ್ರಿಯತೆ ಗಳಿಸುವುದರಿಂದ ಹೆದರಿ ಕೇಂದ್ರ ಕೊರೋನಾ ತಂದಿದೆ ಎಂಬ ಅಭಿಪ್ರಾಯವನ್ನು ಹೇಳಿದೆ.


ಟ್ರಂಪ್’ರನ್ನು ಕರೆಸಿ ಕೋವಿಡ್ ಹರಡಿದವರು ಯಾರು ಎಂದು ಕಠಿಣ ಶಬ್ದಗಳಿಂದ ಮೋದಿಯವರನ್ನು ಕೆಣಕಿದೆ. ಭಾರತ್ ಜೋಡೋ ಯಾತ್ರೆಯ ಬಿರುಗಾಳಿಗೆ ಕೇಂದ್ರ ಸರಕಾರ ತತ್ತರಿಸಿದೆ. ನಿಮ್ಮ ಮೆರವಣಿಗೆ ನಡೆಯುತ್ತದೆ, ಭಾರತ್ ಜೋಡೋ ಯಾತ್ರೆ ಮುಂದೂಡಬೇಕೇ ಎಂದು ಕೇಂದ್ರ ಆರೋಗ್ಯ ಮಂತ್ರಿಯನ್ನು ಕೆಣಕಿದೆ.
ಭಾರತ್ ಜೋಡೋ ಯಾತ್ರೆಗೆ ಜನ ಸಮೂಹವೇ ಸೇರುವುದರಿಂದ ಮೋದಿಯವರು ಮತ್ತು ಅವರ ಸರಕಾರ ನಡುಗಿದೆ. ಅದಕ್ಕಾಗಿಯೇ ಕೋರೋನಾದ ಬೆದರಿಕೆಯೊಡ್ಡಿ ಜೋಡೋ ಯಾತ್ರೆ ಮುಂದೂಡಲು ಹೇಳುತ್ತಿದ್ದೀರಾ ಎಂದು ರಾಜಸ್ತಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರೂ ಕೇಂದ್ರವನ್ನು ಖಂಡಿಸಿದ್ದರು. ಇವರ ಈಗಿನ ಕೋರೋನಾ ರಾಜಕೀಯ ಪ್ರೇರಿತ ಎಂದೂ ಅವರು ಹೇಳಿದ್ದಾರೆ.


“ಮೊನ್ನೆ ತಾನೆ ಪ್ರಧಾನಿ ಮೋದಿಯವರು ತ್ರಿಪುರಾದಲ್ಲಿ ಜಾಥಾ ನಡೆಸಿದರು. ಅಲ್ಲಿ ಏಕೆ ಕೊರೋನಾ ನಿಯಮಾವಳಿ ಪಾಲಿಸಲಿಲ್ಲ. ಬಂಗಾಳದಲ್ಲೂ ಪ್ರಧಾನಿ ರಾಲಿ ನಡೆಸಿದರು. ಆಗ ಕೇಂದ್ರ ಆರೋಗ್ಯ ಮಂತ್ರಿ ನಿದ್ರೆ ಮಾಡುತ್ತಿದ್ದರೇ? ಎಂದು ಗೆಹ್ಲೋಟ್ ಪ್ರಶ್ನಿಸಿದ್ದಾರೆ.


ಬಿಜೆಪಿ ಯಾತ್ರೆಗೆ ತೊಂದರೆ ಇಲ್ಲ, ಕಾಂಗ್ರೆಸ್ ಯಾತ್ರೆಗೆ ಬಿಜೆಪಿಯ ಕೋವಿಡ್ ಕಾಟವೇ ಎಂದು ಛತ್ತೀಸ್’ಗಡ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಪ್ರಶ್ನಿಸಿದ್ದಾರೆ.
“ಕೊರೋನಾ ಜೋರಾಗಿದ್ದಾಗ ನೀವು ಅಸ್ಸಾಂ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳಗಳಲ್ಲಿ ಚುನಾವಣೆ ನಡೆಸಿದಿರಿ. ಈಗ ಭಾರತ್ ಜೋಡೋ ಯಾತ್ರೆ ಸಮಯದಲ್ಲಿ ನಿಮ್ಮ ಕೊರೋನಾ ಕೂಗಾಟ ಯಾವುದಕ್ಕೆ? ಈಗ ಆಗಿನ ಭೀಕರ ಕೊರೋನಾ ಸ್ಥಿತಿ ಎಲ್ಲಿದೆ?” ಎಂದು ಬಘೇಲ್ ಪ್ರಶ್ನಿಸಿದ್ದಾರೆ.


ಕಳೆದ ಆರು ತಿಂಗಳಲ್ಲಿ ರೂಪಾಂತರಿ ಕೊರೋನಾ ವೈರಸ್ ಬಿಎಫ್.7 ಓಮೈಕ್ರಾನ್ ನಾಲ್ಕು ಪ್ರಕರಣಗಳು ಭಾರತದಲ್ಲಿ ಪತ್ತೆಯಾಗಿವೆ. ದೇಶದಲ್ಲಿ ಈಗ ಬೇರೆ ಬೇರೆ ರೂಪಾಂತರಿ ವೈರಸ್ ಬಾಧೆಗೀಡಾದ 10 ಪ್ರಕರಣಗಳು ಇರುವುದಾಗಿ ಹೇಳಲಾಗಿದೆ.



Join Whatsapp