ಶಿವಾಜಿ ಕಾಲದಲ್ಲಿ ಬಲ್ಬ್ ಇತ್ತಾ?: ಜಾಲತಾಣಗಳಲ್ಲಿ ಅಕ್ಷಯ್ ಕುಮಾರ್ ಸಖತ್ ಟ್ರೋಲ್

Prasthutha|

ನವದೆಹಲಿ: ಬಾಲಿವುಡ್ ನಟ ಅಕ್ಷಯ್ ಕುಮಾರ್ ನಟಿಸಿರುವ ಮರಾಠಿ ಚಿತ್ರ “ವೇದತ್ ಮರಾಠೆ ವೀರ್ ದೌಡ್ಲೆ ಸಾತ್”ನ ಫಸ್ಟ್ ಲುಕ್ ಅನ್ನು ಬಿಡುಗಡೆಗೊಂಡಿದ್ದು, ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಅಕ್ಷಯ್ ಕುಮಾರ್ ಅವರನ್ನು ಟ್ರೋಲ್ ಮಾಡಲಾಗುತ್ತಿದೆ.

- Advertisement -


ಶಿವಾಜಿಯ ವೇಷ ಧರಿಸಿದ ಅಕ್ಷಯ್ ಕುಮಾರ್ ಸಣ್ಣ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ವಿದ್ಯುತ್ ಬಲ್ಬ್’ಗಳು ಕಾಣಿಸಿವೆ. ಹೀಗಾಗಿ ಶಿವಾಜಿ ಕಾಲದಲ್ಲಿ ವಿದ್ಯುತ್ ಬಲ್ಬ್, ಕರೆಂಟ್ ಇತ್ತೇ? ಎಂದು ಟ್ರೋಲ್ ಮಾಡಲಾಗುತ್ತಿದೆ.


ಶಿವಾಜಿ ಮಹಾರಾಜರು 1674 ರಿಂದ 1680 ರವರೆಗೆ ಆಳಿದ್ದರು. ಥಾಮಸ್ ಎಡಿಸನ್ 1880 ರಲ್ಲಿ ಬಲ್ಬ್ ಅನ್ನು ಕಂಡುಹಿಡಿದರು. ಆದರೆ ಶಿವಾಜಿಯ ಚಿತ್ರದಲ್ಲಿ ಬಲ್ಬ್ ಇರಲು ಹೇಗೆ ಸಾಧ್ಯ? ಎಂದು ವ್ಯಕ್ತಿಯೊಬ್ಬರು ಇನ್ಸ್’ಸ್ಟಾಮ್’ನಲ್ಲಿ ಪ್ರಶ್ನಿಸಿದ್ದಾರೆ.

- Advertisement -


ಇನ್ನೊಬ್ಬರು, “ಅಕ್ಷಯ್ ಕುಮಾರ್ ಶಿವಾಜಿ ಮಹಾರಾಜ್ ಪಾತ್ರದಲ್ಲಿ ನಟಿಸುವುದರಲ್ಲಿ ಅನೇಕ ತಪ್ಪುಗಳಿವೆ. ಶಿವಾಜಿ ಮಹಾರಾಜರು ತಮ್ಮ 50ನೇ ವಯಸ್ಸಿನಲ್ಲಿ ನಿಧನರಾದರು. ಅಕ್ಷಯ್ ಗೆ 55 ವರ್ಷ. ಉತ್ತಮ ನಟನಾ ಕೌಶಲ್ಯವನ್ನು ಹೊಂದಿರುವ ಮರಾಠಿ ನಟನನ್ನು ಈ ಪಾತ್ರಕ್ಕೆ ಆಯ್ಕೆ ಮಾಡಿಕೊಳ್ಳಬಹುದಿತ್ತಲ್ಲವೇ ಎಂದು ಪ್ರಶ್ನಿಸಿದ್ದಾರೆ.

Join Whatsapp