ಮೋದಿ ಕಾರ್ಯಕ್ರಮಕ್ಕೆ ಬರಲು ಪೋಷಕರಿಗೆ ಅನುಕೂಲವಾಗಲು ಶಾಲೆಗಳಿಗೆ ಜಿಲ್ಲಾಧಿಕಾರಿ ರಜೆ ನೀಡಿದರೇ?

Prasthutha|

DC ಆದೇಶವಿದ್ದರೂ ಕೆಲ ಶಾಲೆಗಳಲ್ಲಿ ಆನ್ ಲೈನ್ ತರಗತಿಗೆ ತಯಾರಿ !

- Advertisement -

ಮಂಗಳೂರು: ಸೆಪ್ಟಂಬರ್ 2 ರಂದು ಪ್ರಧಾನಿ ಮೋದಿ ಮಂಗಳೂರಿಗೆ ಆಗಮಿಸುತ್ತಿದ್ದಾರೆ. ಆದರೆ ಬಿಜೆಪಿ ಸರ್ಕಾರಗಳ ಜನ ವಿರೋಧಿ ನೀತಿಗಳಿಂದ ಕಂಗೆಟ್ಟಿರುವ ಜನರು ಈ ಕಾರ್ಯಕ್ರಮದ ಬಗ್ಗೆ ಅಷ್ಟೊಂದು ತಲೆ ಕೆಡಿಸಿಕೊಂಡಿಲ್ಲ. ಹೀಗಾಗಿ ಕಾರ್ಯಕ್ರಮಕ್ಕೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದಿಲ್ಲ ಎಂಬ ಅನುಮಾನ ಬಿಜೆಪಿಗೆ ಮೂಡಿದೆ. ಈ ಹಿನ್ನೆಲೆಯಲ್ಲಿ ಅಂದಿನ ಕಾರ್ಯಕ್ರಮಕ್ಕೆ ಜನ ಸೇರಿಸುವ ಜವಾಬ್ದಾರಿಯನ್ನು ಸರ್ಕಾರಿ ಇಲಾಖೆಗಳಿಗೆ ನೀಡಲಾಗಿದೆ ಎಂಬ ಆರೋಪ ಸಾರ್ವಜನಿಕರಿಂದ ವ್ಯಕ್ತವಾಗಿದೆ.


ಈ ಆರೋಪಗಳಿಗೆ ಪೂರಕವೆಂಬಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರು ಸೆಪ್ಟಂಬರ್ 2 ರಂದು ನಗರ ಕಮಿಷನರೇಟ್ ವ್ಯಾಪ್ತಿಗೆ ಸೀಮಿತಗೊಳಿಸಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ. ಗಣಪತಿ ವಿಸರ್ಜನೆ ನಿಮಿತ್ತ ರಜೆ ಎಂದು ಹೇಳಿದ್ದರೂ, ಈ ರಜೆ ಘೋಷಣೆ ಮೋದಿ ಕಾರ್ಯಕ್ರಮಕ್ಕೆ ಮಕ್ಕಳ ಪೋಷಕರಿಗೆ ಭಾಗವಹಿಸಲು ಅನುಕೂಲ ಮಾಡಿಕೊಡುವ ಸಲುವಾಗಿಯೇ ನೀಡಲಾಗಿದೆ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ. ಗಣಪತಿ ವಿಸರ್ಜನೆಗಾಗಿ ರಜೆ ಘೋಷಿಸಿದ್ದರೆ, ಜಿಲ್ಲೆಯ ಇತರೆಡೆಗಳಲ್ಲಿ ಯಾಕೆ ರಜೆ ಘೋಷಿಸಿಲ್ಲ, ಅಲ್ಲೆಲ್ಲಾ ಗಣಪತಿ ವಿಸರ್ಜನೆ ಇಲ್ಲವೇ ಎನ್ನುವುದು ಅವರ ಪ್ರಶ್ನೆಯಾಗಿದೆ.

- Advertisement -


ಕೆಲ ಶಾಲೆಗಳಿಂದ ಆನ್ ಲೈನ್ ತರಗತಿ !


ಇದೀಗಾಗಲೇ ಮಳೆ ಮತ್ತಿತರ ಹಲವು ರಜೆಗಳಿಂದ ಕಂಗೆಟ್ಟಿರುವ ಕೆಲ ಶಾಲಾಡಳಿತಗಳು, ಮೋದಿ ಕಾರ್ಯಕ್ರಮ ದಿನ ಮಕ್ಕಳಿಗೆ ರಜೆ ನೀಡದೆ ಆನ್ ಲೈನ್ ತರಗತಿ ನಡೆಸಲು ಮುಂದಾಗಿದೆ. ಮೋದಿ ಕಾರ್ಯಕ್ರಮ ನಡೆಯುವ ಮೈದಾನದ ಪಕ್ಕದಲ್ಲೇ ಇರುವ ಪುಣೆ ಮೂಲದ ಪ್ರತಿಷ್ಠಿತ ಶಾಲೆಯೊಂದು ಕೂಡಾ ಪೋಷಕರಿಗೆ ಮಕ್ಕಳನ್ನು ಇಡೀ ದಿನ ಆನ್ ಲೈನ್ ತರಗತಿಗೆ ಸಜ್ಜುಗೊಳಿಸುವಂತೆ ಸಂದೇಶ ಕಳಿಸಿದ್ದಾರೆ. ಇದು ಜಿಲ್ಲಾಡಳಿತದ ನಿರ್ಧಾರದ ಕುರಿತು ಕೆಲ ಶಾಲೆಗಳಿಗೆ ಸಹಮತ ಇಲ್ಲದೇ ಇರುವುದು ಅನ್ನು ಸೂಚಿಸಿದೆ ಎನ್ನಲಾಗಿದೆ.




Join Whatsapp