ಕೋವಿಡ್ ಮಾರ್ಗಸೂಚಿಯನ್ನು ಧಿಕ್ಕರಿಸಿ ಪ್ರಜಾ ಸಂಗ್ರಾಮ ಯಾತ್ರೆ ನಡೆಸಿದ ಬಿಜೆಪಿ ತೆಲಂಗಾಣ ಘಟಕ

Prasthutha|

ಹೈದಾರಾಬಾದ್: ಸರ್ಕಾರದ ಕೋವಿಡ್ – 19 ಮುನ್ನೆಚ್ಚರಿಕೆಗಳನ್ನು ಗಾಳಿಗೆ ತೂರಿ ಬಿಜೆಪಿ ತೆಲಂಗಾಣ ಘಟಕವು ಪ್ರಜಾ ಸಂಗ್ರಾಮ ಯಾತ್ರೆ ಆಯೋಜಿಸಿತ್ತು. ಬಿಜೆಪಿಯ ತೆಲಂಗಾಣ ಮುಖ್ಯಸ್ಥ ಬಂಡಿ ಸಂಜಯ್ ಎಂಬಾತನ ನೇತೃತ್ವದಲ್ಲಿ ಈ ಸಭೆ ನಡೆಸಲಾಗಿತ್ತು ಎಂದು ಹೇಳಲಾಗಿದೆ. ಹೈದಾರಾಬಾದ್ ಹೃದಯ ಭಾಗದಲ್ಲಿರುವ ಭಾಗ್ಯಲಕ್ಷ್ಮಿ ದೇವಸ್ಥಾನದಿಂದ ಈ ಯಾತ್ರೆಯನ್ನು ಆರಂಭಿಸಲಾಗಿತ್ತು.

- Advertisement -

ದೇಶದಾದ್ಯಂತ ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಮಧ್ಯೆ ಜನಸಮೂಹವನ್ನು ಸೇರಿಸಿ ಯಾತ್ರೆಯನ್ನು ಆಯೋಜಿಸಿರುವುದು ಸ್ಥಳೀಯ ಜನರನ್ನು ಆಕ್ರೋಶಿತರನ್ನಾಗಿಸಿದೆ. ತೆಲಂಗಾಣದಲ್ಲಿ ಪ್ರತಿದಿನ ಸಾವಿರಾರು ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿರುವುದು ಜನರನ್ನು ಕಂಗೆಡಿಸಿರುವಾಗ ಈ ಯಾತ್ರೆಯ ಅನಿವಾರ್ಯತೆಯ ಕುರಿತು ಸಾರ್ವಜನಿಕ ಪ್ರಶ್ನಿಸ ತೊಡಗಿದ್ದಾರೆ.

ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ದೇಶವು ಕೋವಿಡ್ -19 ರ ಮೂರನೇ ತರಂಗಕ್ಕೆ ಸಾಕ್ಷಿಯಾಗಬಹುದು ಎಂದು ತಜ್ಞರು ಈಗಾಗಲೇ ಎಚ್ಚರಿಸಿದ್ದಾರೆ.

- Advertisement -

ಇಂತಹ ಸನ್ನಿವೇಶದಲ್ಲಿ ನಗರದ ಹೃದಯಭಾಗದಲ್ಲಿ ನೂರಾರು ಜನರನ್ನು ಸೇರಿಸಿ ಸಭೆ ನಡೆಸಿರುವುದು ಗಂಭೀರವಾದ ಆರೋಗ್ಯದ ಸಮಸ್ಯೆಯನ್ನು ಉಂಟುಮಾಡುವ ಸಾಧ್ಯತೆಯಿದೆ. ಈ ಹಿಂದೆ ಜನರು ರಾಜಕೀಯ ಮತ್ತು ಧಾರ್ಮಿಕ ಸಭೆ ಸಮಾರಂಭಗಳನ್ನು ಆಯೋಜಿಸಿದ ಹಿನ್ನೆಲೆಯಲ್ಲಿ ಕೋವಿಡ್ – 19 ಎರಡನೇ ಅಲೆ ವ್ಯಾಪಕವಾಗಲು ಪ್ರಮುಖ ಕಾರಣವೆಂದು ತಜ್ಞರು ತಿಳಿಸಿದ್ದಾರೆ.

ಈ ಸಭೆಯಲ್ಲಿ ಎ.ಐ.ಎಂ.ಐ.ಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮತ್ತು ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಅವರನ್ನು ಗುರಿಯಾಗಿಸಿ ಬಂಡಿ ಸಂಜಯ್ ತೀವ್ರ ವಾಗ್ದಾಳಿ ನಡೆಸಿದ್ದರು. ತೆಲಂಗಾಣ ಅಸೆಂಬ್ಲಿಗೆ 2023 ರಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ಬಿಜೆಪಿ ಯನ್ನು ತೆಲಂಗಾಣದಲ್ಲಿ ಅಧಿಕಾರಕ್ಕೇರಿಸುವ ನಿಟ್ಟಿನಲ್ಲಿ ಈ ರೀತಿಯ ಕೋಮು ಪ್ರಚೋದನಕಾರಿ ಸಭೆಯನ್ನು ಅಯೋಜಿಸಲಾಗಿದೆಯೆಂದು ಸಾರ್ವಜನಿಕರು ಆರೋಪಿಸಿದ್ದಾರೆ.

Join Whatsapp