ದಿಬ್ರುಗಢ ರ್‍ಯಾಂಗಿಂಗ್ ಪ್ರಕರಣ: ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶ

Prasthutha|

ಗುವಾಹಟಿ: ದಿಬ್ರುಗಢ ವಿಶ್ವವಿದ್ಯಾಲಯದಲ್ಲಿ ನಡೆದ ರ್‍ಯಾಂಗಿಂಗ್ ಘಟನೆಯ ಬಗ್ಗೆ ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶಿಸಿರುವುದಾಗಿ ದಿಬ್ರುಗಢ ಜಿಲ್ಲಾಧಿಕಾರಿ ಬಿಸ್ವಜಿತ್ ಪೆಗು ತಿಳಿಸಿದ್ದಾರೆ.

- Advertisement -

ಎಡಿಸಿ ಸಂಘಮಿತ್ರಾ ಬರುವಾ ಅವರು ತನಿಖೆಯ ನೇತೃತ್ವ ವಹಿಸಲಿದ್ದಾರೆ.

ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿ ಆನಂದ್ ಶರ್ಮಾ  ರ್‍ಯಾಂಗಿಂಗ್ ನಿಂದ ಪಾರಾಗಲು ಹಾಸ್ಟೆಲ್ ಕಟ್ಟಡದ ಎರಡನೇ ಮಹಡಿಯಿಂದ ಜಿಗಿದು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು

- Advertisement -

ದಿಬ್ರುಗಢ ವಿಶ್ವವಿದ್ಯಾಲಯದಲ್ಲಿ ನಡೆದ ರ್‍ಯಾಂಗಿಂಗ್ ಘಟನೆಯನ್ನು ಖಂಡಿಸಿದ ಅಸ್ಸಾಂ ಶಿಕ್ಷಣ ಸಚಿವ ಡಾ.ರಾನೋಜ್ ಪೆಗು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ದಿಬ್ರುಗಢ ವಿಶ್ವವಿದ್ಯಾಲಯ ಪ್ರಾಧಿಕಾರ ಮತ್ತು ಪೊಲೀಸರಿಗೆ  ಸೂಚಿಸಿದ್ದರು.



Join Whatsapp