ರಾಜೇಶ್ ಪವಿತ್ರನ್ ಮೇಲೆ ನಕಲಿ ಮೊಕದ್ದಮೆ ದಾಖಲು: ಧರ್ಮೇಂದ್ರ ಆರೋಪ

Prasthutha|

ಮಂಗಳೂರು: ಅಖಿಲ ಭಾರತ ಹಿಂದೂ ಮಹಾ ಸಭಾದ ರಾಜ್ಯಾಧ್ಯಕ್ಷ ರಾಜೇಶ್ ಪವಿತ್ರನ್ ಅವರ ಮೇಲೆ ನಕಲಿ ಮೊಕದ್ದಮೆ ಹೂಡಲಾಗಿದೆ ಎಂದು ಅಖಿಲ ಭಾರತ ಹಿಂದೂ ಮಹಾ ಸಭಾ ರಾಜ್ಯ ಪ್ರಧಾನ ಕಾರ್ಯದರ್ಶಿ ಧರ್ಮೇಂದ್ರ ಆರೋಪಿಸಿದ್ದಾರೆ.

- Advertisement -

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇರಳ, ಪಶ್ಚಿಮ ಬಂಗಾಳಗಳಲ್ಲಿ ಇಂತಹದ್ದನ್ನು ಕಂಡಿದ್ದೇವೆ. ಈಗ ಕರ್ನಾಟಕದಲ್ಲಿ ನಮ್ಮ ಸಂಘಟನೆಯ ಮೇಲೆ ರಾಜಕೀಯ ಷಡ್ಯಂತ್ರ ನಡೆಸಿದೆ. ರಾಜಕೀಯವಾಗಿ ಬೆಳೆಯುತ್ತಿರುವ ಹಿಂದೂ ಮಹಾ ಸಭಾ ಮುಂದಿನ ಚುನಾವಣೆಯಲ್ಲಿ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂಬ ಕಾರಣಕ್ಕೆ ರಾಜೇಶ್ ಪವಿತ್ರನ್ ಅವರ ಮೇಲೆ ನಕಲಿ ಪ್ರಕರಣ ಸೃಷ್ಟಿಸಿ ಬಂಧಿಸಲಾಗಿದೆ ಎಂದು ಧರ್ಮೇಂದ್ರ ಹೇಳಿದರು.

ಪವಿತ್ರನ್ ವಿರುದ್ಧ ದೂರು ನೀಡಿರುವ ಸುರೇಶ್ ಇಂತಹ ಕೆಲಸದಲ್ಲಿ ಎತ್ತಿದ ಕೈ. ಅವ್ಯವಹಾರಕ್ಕೆ ಆತನನ್ನು ಕೆಲಸದಿಂದ ತೆಗೆಯಲಾಗಿತ್ತು. ಪವಿತ್ರನ್ ದೊಡ್ಡ ಉದ್ಯಮಿ. ಸುರತ್ಕಲ್ ಪೇಟೆಯಲ್ಲೇ ಅವರ ವ್ಯವಹಾರ ಇದೆ. ಸುರೇಶ್ನದ್ದು ಎಲ್ಲಿದೆ ಪೊಲೀಸರೇ ತೋರಿಸಿ ಎಂದು ಅವರು ಸವಾಲು ಹಾಕಿದರು.

- Advertisement -

ರಾಜೇಶ್ರನ್ನು ಬಂಧಿಸುವಾಗ ಯಾಕೆ ನೋಟೀಸ್ ನೀಡಿಲ್ಲ. ಅವರ ಮೇಲಿನ ನಿಜವಾದ ಆರೋಪ ಏನು? ಸುರೇಶ್ನ ಲ್ಯಾಪ್ ಟಾಪ್ ಹಳೆಯ ಕಚೇರಿಯಲ್ಲಿ ಇದೆ. ಅದನ್ನು ಯಾರು ಬೇಕಾದರೂ ನೋಡಬಹುದು. ಈ ಬಂಧನವು ರಾಜಕೀಯ ಷಡ್ಯಂತ್ರ ಎಂದು ಧರ್ಮೇಂದ್ರ ಆರೋಪಿಸಿದರು.

ರಾಜೇಶ್ ಪವಿತ್ರನ್ ಅವರ ಉದ್ಯಮ, ಆಶ್ರಮ ಮುಚ್ಚಲು ಪೊಲೀಸರು ಪ್ರಯತ್ನಿಸಿ ಸೋತಿದ್ದಾರೆ. ಈಗ ಸುಳ್ಳು ಕೇಸಿನಲ್ಲಿ ಸಿಕ್ಕಿಸಿದ್ದಾರೆ. ನಾವು ಸಮಯ ಬಂದರೆ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕುವುದಾಗಿಯೂ ಅವರು ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಹರ್ಷ ನಾಯಕ್, ರಾಜೇಶ್ ಪೂಜಾರಿ ಉಪಸ್ಥಿತರಿದ್ದರು.

Join Whatsapp