ಧರ್ಮಸ್ಥಳದಲ್ಲಿ ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಜಾರಿ

Prasthutha|

- Advertisement -

ಮಂಗಳೂರು: ಧರ್ಮಸ್ಥಳ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಜಾರಿ ತರಲಾಗಿದ್ದು, ಅ.2ರ ಸೋಮವಾರ ಗಾಂಧಿ ಜಯಂತಿ ಅಂಗವಾಗಿ ಮಹಾತ್ಮ ಗಾಂಧಿಜೀ ಪ್ರತಿಮೆಗೆ ಪುಷ್ಪಾರ್ಚಾಣೆ ಮಾಡಿ ರಾಜ್ಯಸಭಾ ಸದಸ್ಯರಾದ ಡಾ.ಡಿ. ವೀರೇಂದ್ರ ಹೆಗಡೆ ಅವರು ಈ ಬಗ್ಗೆ ಅಧಿಕೃತ ಘೋಷಣೆ ಮಾಡಿದರು.

ಗಾಂಧಿಯವರ ವಿಚಾರಧಾರೆ ಎಂದಿಗೂ ಸಾರ್ವಕಾಲಿಕ. ಸ್ವಚ್ಛತೆ ಬಗೆಗಿದ್ದ ಕಾಳಜಿ, ಬದ್ಧತೆ ನಮಗೆಲ್ಲ ಮಾದರಿ. ಈ ನಿಟ್ಟಿನಲ್ಲಿ ಈ ದಿವಸ ಏಕ ಬಳಕೆಯ ವಸ್ತುಗಳಾದ ಪ್ಲಾಸ್ಟಿಕ್ ಕೈ ಚೀಲಗಳು ಪ್ಲಾಸ್ಟಿಕ್ ಕಡ್ಡಿಗಳು, ದಿನ ಬಳಸುವ ಪ್ಲಾಸ್ಟಿಕ್ ವಸ್ತುಗಳಾದ ಲೋಟ, ಚೂರಿಗಳು, ಪ್ಯಾಕಿಂಗ್ ಗೆ ಬಳಸುವ ರ್ಯಾಪರ್, ಪ್ಲಾಸ್ಟಿಕ್ ಆಹ್ವಾನ ಪತ್ರಿಕೆ, ಪ್ಲಾಸ್ಟಿಕ್ ಹಾಗೂ ಪಿವಿಸಿ ಬ್ಯಾನರ್ಗಳು ಮೊದಲಾದವುಗಳನ್ನು ನಿಷೇಧಿಸಲಾಗಿದೆ ಎಂದು ಘೋಷಿಸಿದರು.

- Advertisement -

ದೇಶದಾದ್ಯಂತ ಏಕ‌ಬಳಕೆಯ ಪ್ಲಾಸ್ಟಿಕ್ ನಿಷೇಧ ಹೇರಲಾಗಿದ್ದು , ಕರ್ನಾಟಕ ಸರ್ಕಾರವು 2016 ರಿಂದಲೇ ಪ್ಲಾಸ್ಟಿಕ್ ಬಳಕೆ ನಿಷೇಧಿಸಿದೆ. ಇವತ್ತಿನ ಪ್ಲಾಸ್ಟಿಕ್ ನಿಷೇಧ ರಾಜ್ಯಕ್ಕೆ ಮೊದಲು ಹಾಗೂ ಮಾದರಿ ಯಾಗಲಿ ಎಂದರು.

ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಾಧಿಕಾರಿ ಪ್ರಸಸ್ನ ಭಕ್ತ, ಸ್ಥಳೀಯ ಪಂಚಾಯತ್ ಅಧ್ಯಕ್ಷೆ ವಿಮಲ, ಉಪಾಧ್ಯಕ್ಷ ಶ್ರೀನಿವಾಸ, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಕುಸುಮಾಧರ, ಸ್ವಚ್ಛ ಭಾರತ್ ಮಿಷನ್ (ಗ್ರಾ) ಐಇಸಿ ತಜ್ಞ ಡೊಂಬಯ್ಯ ಇಡ್ಕಿದು, ಎಚ್.ಆರ್.ಡಿ ನವೀನ್ , ಜಲ್ ಜೀವನ್ ಮಿಷನ್ ನ ವಿಘ್ನೇಶ್, ಗ್ರಾಮ ಪಂಚಾಯತ್ ಸಿಬ್ಬಂದಿಗಳು ಹಾಗೂ ಇತರರು ಉಪಸ್ಥಿತರಿದ್ದರು.

Join Whatsapp