ಧರ್ಮ ಸಂಸತ್ ದ್ವೇಷ ಭಾಷಣ: ಉತ್ತರಾಖಂಡ ಸರ್ಕಾರಕ್ಕೆ ನೋಟೀಸ್ ಜಾರಿಗೊಳಿಸಿದ ಸುಪ್ರೀಂ ಕೋರ್ಟ್

Prasthutha|

ನವದೆಹಲಿ : ಇತ್ತೀಚ್ಚೆಗೆ ಉತ್ತರಖಂಡದಲ್ಲಿ ನಡೆದ ಧರ್ಮ ಸಂಸತ್ ಕಾಯ್ರಕ್ರಮದಲ್ಲಿ ಧರ್ಮದ ಕುರಿತು ದ್ವೇಷ ಭಾಷಣ ಮಾಡಿದ ಹಿನ್ನೆಲೆಯಲ್ಲಿ ಇನ್ನು ಹತ್ತು ದಿನಗಳೊಳಗೆ ಉತ್ತರಾಖಂಡ ಸರ್ಕಾರ ಇದಕ್ಕೆ ಉತ್ತರ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಇಂದು ನೋಟಿಸ್ ಜಾರಿ ಮಾಡಿದೆ. ಹರಿದ್ವಾರದಲ್ಲಿ ನಡೆದ ಧರ್ಮ ಸಂಸತ್‌ನಲ್ಲಿ ಹತ್ಯಾಕಾಂಡದ ಕುರಿತು ಬಹಿರಂಗವಾಗಿ ಕರೆ ನೀಡಿದ ದ್ವೇಷ ಭಾಷಣದ ಪ್ರಕರಣದ ಕುರಿತು ವಿಚಾರಣೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಶಿಕ್ಷೆ ನೀಡಬೇಕು ಎಂದು ಅರ್ಜಿದಾರ ಖುರ್ಬಾನ್‌ ಆಲಿ ಅರ್ಜಿ ಸಲ್ಲಿಸಿದ್ದರು ಹಾಗೂ ಅರ್ಜಿಯಲ್ಲಿ ತನಿಖಾ ದಳಗಳನ್ನು ರಚನೆ ಮಾಡಬೇಕು ಎಂದು ಸೂಚಿಸಿದ್ದರು.

- Advertisement -

ಅರ್ಜಿದಾರರ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಕಪಿಲ್ ಸಿಬಲ್ “ದೇಶದ ಘೋಷಣೆಗಳು ಸತ್ಯಮೇವ ಜಯತೆಯಿಂದ ಸಶಸ್ತ್ರಮೇವ ಜಯತೆಗೆ ಬದಲಾಗಿವೆ” ಎಂದು ಉನ್ನತ ನ್ಯಾಯಾಲಯಕ್ಕೆ ತಿಳಿಸಿದರು, ಹಾಗೂ ಜನವರಿ 23ರಂದು ಅಲೀಘಡ್‌ನಲ್ಲಿ ನಡೆಸಲು ತೀರ್ಮಾನಿಸಲಾದ ಧರ್ಮ ಸಂಸದ್‌ ಕಾರ್ಯಕ್ರಮದ ಕುರಿತು ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಅರ್ಜಿದಾರ ಖುರ್ಬಾನ್‌ ಆಲಿಗೆ ನಿರ್ದೇಶಿಸಿದರು.

ಈ ವಿಷಯಕ್ಕೆ ಸಂಬಂದಿಸಿದಂತೆ ಉತ್ತರಾಖಂಡ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ಹೆಚ್ಚಿನ ಆಕ್ರೋಶದ ನಂತರ, ಪೊಲೀಸರು ಒಬ್ಬ ವ್ಯಕ್ತಿಯನ್ನು ಮಾತ್ರ ಹೆಸರಿಸಿದ್ದು, “ಈತ ವಸೀಮ್ ರಿಜ್ವಿ, ಮತಾಂತರಗೊಂಡು ಮತ್ತು ತನ್ನನ್ನು ತಾನು ಜಿತೇಂದ್ರ ತ್ಯಾಗಿ ಎಂದು ಕರೆದುಕೊಳ್ಳುತ್ತಾನೆ” ಹಾಗೂ ಇನ್ನೂ ನಾಲ್ಕು ಹೆಸರುಗಳನ್ನು ಸೂಚಿಸಿದ್ದು, ಸಾಗರ್ ಸಿಧು ಮಹಾರಾಜ್ ಮತ್ತು ಯತಿ ನರಸಿಂಹಾನಂದ್, ಧರ್ಮದಾಸ್ ಮತ್ತು ಪೂಜಾ ಶಕುನ್ ಪಾಂಡೆ ಎಂದು ತಿಳಿದು ಬಂದಿದೆ. ಆದರೆ ಆರೋಪಿಗಳನ್ನು ಬಂಧನ ಮಾಡಲಿಲ್ಲ ಎಂದು ತಿಳಿಸಿದರು.



Join Whatsapp