ಫಿನಾಲೆ ಸಮೀಪದಲ್ಲಿ ಧನರಾಜ್ ಆಚಾರ್ ಎಲಿಮಿನೇಟ್

Prasthutha|

‘ಬಿಗ್ ಬಾಸ್ ಕನ್ನಡ ಸೀಸನ್​ 11’ ಶೋ ಆರಂಭ ಆದಾಗ ಧನರಾಜ್ ಆಚಾರ್ ಅವರು ಅಷ್ಟೇನೂ ಸ್ಟ್ರಾಂಗ್ ಸ್ಪರ್ಧಿ ಎಲ್ಲ ಎಂಬ ಅಭಿಪ್ರಾಯ ಅನೇಕರಿಗೆ ಇತ್ತು. ಆದರೆ ನಂತರದ ದಿನಗಳಲ್ಲಿ ಅವರು ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಿಕೊಂಡಿದ್ದರು. ಆ ಕಾರಣದಿಂದ ಅವರು ಸೆಮಿ ಫೈನಲ್ ತನಕ ಬರಲು ಸಾಧ್ಯವಾಯ್ತು. ಇನ್ನೇನು ಅವರು ಫಿನಾಲೆಗೂ ಕಾಲಿಡಬಹುದು ಎಂಬ ಸಾಧ್ಯತೆ ಇತ್ತು. ಆದರೆ ಗ್ರೇ ಏರಿಯಾ ಹುಡುಕಿಕೊಂಡಿದ್ದು ಅವರಿಗೆ ಮುಳುವಾಯಿತು. ಈ ವಾರ ಅವರು ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ.

- Advertisement -

ದೊಡ್ಮನೆಯನ್ನು ತೊರೆಯುವಾಗ ಧನರಾಜ್ ತುಂಬ ಎಮೋಷನಲ್ ಆದರು.

‘ಕಪ್ ಗೆಲ್ಲಲು ನಾನು ಸೋತಿರಬಹುದು. ಆದರೆ ಬದುಕಿನಲ್ಲಿ ಗೆಲ್ಲುತ್ತೇನೆ ಎಂಬ ಪಾಠವನ್ನು ಈ ಮನೆ ಕಲಿಸಿದೆ. ಈ ಅವಕಾಶಕ್ಕೆ ಧನ್ಯವಾದಳು. ಎಲ್ಲರನ್ನೂ ಮಿಸ್ ಮಾಡಿಕೊಳ್ಳುತ್ತೇನೆ’ ಎಂದು ಧನರಾಜ್ ಆಚಾರ್ ಹೇಳಿದರು. ಮನೆಯಿಂದ ಹೊರಗೆ ಬರುವಾಗ ತಮ್ಮ ಆಪ್ತರಿಗೆ ಅವರು ಕೊನೇ ಸಂದೇಶವನ್ನು ತಿಳಿಸಿದರು.



Join Whatsapp