ನವದೆಹಲಿ: ಕೇಂದ್ರೀಯ ವಿಮಾನಯಾನ ನಿರ್ದೇಶನಾಲಯ ನಿಗದಿತ ಅಂತಾರಾಷ್ಟ್ರೀಯ ವಾಣಿಜ್ಯ ವಿಮಾನಗಳ ಮೇಲಿನ ನಿಷೇಧವನ್ನು ಅ.31 ರವರೆಗೆ ವಿಸ್ತರಿಸಿದೆ.
ಈ ನಿರ್ಬಂಧವು ಅಂತಾರಾಷ್ಟ್ರೀಯ ಎಲ್ಲ ಸರಕು ಕಾರ್ಯಾಚರಣೆಗಳಿಗೆ ಮತ್ತು ನಿರ್ದಿಷ್ಟವಾಗಿ ನಿಯಂತ್ರಕರಿಂದ ಅನುಮೋದಿಸಲ್ಪಟ್ಟ ವಿಮಾನಗಳಿಗೆ ಅನ್ವಯಿಸುವುದಿಲ್ಲ. ಕೋವಿಡ್ ಪ್ರಕರಣಗಳ ಆಧಾರದ ಮೇಲೆ ಆಯ್ದ ಮಾರ್ಗಗಳಲ್ಲಿ ನಿಗದಿತ ವಿಮಾನಗಳ ಪ್ರಯಾಣಕ್ಕೆ ಅನುಮತಿ ಇದೆ ಎಂದು ನಿರ್ದೇಶನಾಲಯ ಹೇಳಿದೆ.
ಕೋವಿಡ್ ನಿಯಂತ್ರಿಸುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕಳೆದ ವರ್ಷ ಮಾರ್ಚ್ 23 ರಂದು ಅಂತಾರಾಷ್ಟ್ರೀಯ ವಿಮಾನಗಳ ಕಾರ್ಯಾಚರಣೆ ನಿಷೇಧಿಸಿತ್ತು. ಆದರೆ, ಕೆಲವು ದೇಶಗಳ ಜೊತೆ ಮಾಡಿಕೊಂಡಿದ್ದ ಏರ್ ಬಬಲ್ ಒಪ್ಪಂದದಂತೆ ವಿಮಾನ ನಿರ್ಬಂಧಗಳನ್ನು ಸರಾಗಗೊಳಿಸಲಾಗಿತ್ತು.