ದ್ವಿಚಕ್ರ ವಾಹನದಲ್ಲಿ EVM ಸಾಗಿಸುತ್ತಿದ್ದವರ ಬಂಧನ

Prasthutha|

ಚೆನ್ನೈ : ತಮಿಳುನಾಡಿನ ವೇಲಚೇರಿ ಎಂಬಲ್ಲಿ ದ್ವಿಚಕ್ರ ವಾಹನದಲ್ಲಿ EVM ಸಾಗಿಸುತ್ತಿದ್ದ ವ್ಯಕ್ತಿಗಳಿಬ್ಬರನ್ನು ಚೆನ್ನೈ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. EVM ನೊಂದಿಗೆ ಬೈಕ್​ನಲ್ಲಿ ಹೋಗುತ್ತಿದ್ದ ವೇಳೆ ಸ್ಥಳೀಯರು ಇಬ್ಬರನ್ನು EVM ಸಮೇತ ಪೊಲೀಸರ ವಶಕ್ಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಕೂಡ ವೈರಲ್​ ಆಗಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ ಎನ್ನಲಾಗಿದೆ.

- Advertisement -

ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ತಮಿಳುನಾಡು ಮುಖ್ಯ ಚುನಾವಣಾಧಿಕಾರಿ, ವಶಪಡಿಸಿಕೊಂಡಿರುವ ಇವಿಎಂಗಳು ಮೀಸಲು ಘಟಕಗಳಾಗಿದ್ದು, ಮಂಗಳವಾರ ಮತದಾನಕ್ಕೆ ಬಳಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳುವುದಾಗಿಯೂ ಹೇಳಿದ್ದಾರೆ.

ತಮಿಳುನಾಡಿನಾದ್ಯಂತ ಒಂದೇ ಹಂತದಲ್ಲಿ ನಿನ್ನೆ ವಿಧಾನಸಭಾ ಚುನಾವಣೆ ನಡೆದಿದ್ದು, ಶೇ. 71.79 ರಷ್ಟು ಮತದಾನ ನಡೆದಿದೆ. ನಟ ವಿಜಯ್​ ಅವರು ಸೈಕಲ್​ ಮೇಲೆ ಬಂದು ಮತದಾನ ಮಾಡಿರುವುದು ಇಡೀ ದಿನ ಸುದ್ದಿಯಾಗಿತ್ತು.

Join Whatsapp