ಚೆನ್ನೈ : ತಮಿಳುನಾಡಿನ ವೇಲಚೇರಿ ಎಂಬಲ್ಲಿ ದ್ವಿಚಕ್ರ ವಾಹನದಲ್ಲಿ EVM ಸಾಗಿಸುತ್ತಿದ್ದ ವ್ಯಕ್ತಿಗಳಿಬ್ಬರನ್ನು ಚೆನ್ನೈ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. EVM ನೊಂದಿಗೆ ಬೈಕ್ನಲ್ಲಿ ಹೋಗುತ್ತಿದ್ದ ವೇಳೆ ಸ್ಥಳೀಯರು ಇಬ್ಬರನ್ನು EVM ಸಮೇತ ಪೊಲೀಸರ ವಶಕ್ಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಕೂಡ ವೈರಲ್ ಆಗಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ ಎನ್ನಲಾಗಿದೆ.
ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ತಮಿಳುನಾಡು ಮುಖ್ಯ ಚುನಾವಣಾಧಿಕಾರಿ, ವಶಪಡಿಸಿಕೊಂಡಿರುವ ಇವಿಎಂಗಳು ಮೀಸಲು ಘಟಕಗಳಾಗಿದ್ದು, ಮಂಗಳವಾರ ಮತದಾನಕ್ಕೆ ಬಳಸಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಕ್ರಮ ತೆಗೆದುಕೊಳ್ಳುವುದಾಗಿಯೂ ಹೇಳಿದ್ದಾರೆ.
ತಮಿಳುನಾಡಿನಾದ್ಯಂತ ಒಂದೇ ಹಂತದಲ್ಲಿ ನಿನ್ನೆ ವಿಧಾನಸಭಾ ಚುನಾವಣೆ ನಡೆದಿದ್ದು, ಶೇ. 71.79 ರಷ್ಟು ಮತದಾನ ನಡೆದಿದೆ. ನಟ ವಿಜಯ್ ಅವರು ಸೈಕಲ್ ಮೇಲೆ ಬಂದು ಮತದಾನ ಮಾಡಿರುವುದು ಇಡೀ ದಿನ ಸುದ್ದಿಯಾಗಿತ್ತು.