ಗ್ರಾಹಕರಿಗೆ ಮತ್ತೊಂದು ಹೊಡೆತ । ಫೋನ್ ಕರೆ ಮತ್ತು ಡೇಟಾಗಳೂ ದುಬಾರಿ

Prasthutha|

- Advertisement -

2021 ರ ಏಪ್ರಿಲ್ 1 ರಿಂದ ಮೊಬೈಲ್ ಫೋನ್ ಕರೆಗಳು ಮತ್ತು ಡೇಟಾ ದುಬಾರಿಯಾಗಲಿದೆ ಎಂದು ಭಾರತೀಯ ಟೆಲಿಕಾಂ ಕಂಪನಿಗಳು ತಿಳಿಸಿವೆ.

ಇನ್ವೆಸ್ಟ್ಮೆಂಟ್ ಇನ್ಫಾರ್ಮೇಶನ್ ಅಂಡ್ ಕ್ರೆಡಿಟ್ ರೇಟಿಂಗ್ ಸೊಸೈಟಿ (ICRA) ವರದಿಯ ಪ್ರಕಾರ, ಕಂಪನಿಗಳು ಏಪ್ರಿಲ್ 1 ರಿಂದ ಪ್ರಾರಂಭವಾಗುವ 2021-22ರ ಆರ್ಥಿಕ ವರ್ಷದಲ್ಲಿ ತಮ್ಮ ಆದಾಯವನ್ನು ಹೆಚ್ಚಿಸಲು ಸುಂಕವನ್ನು ಹೆಚ್ಚಿಸಬಹುದು ಎಂದು ತಿಳಿಸಿವೆ.

- Advertisement -

ಕೊರೊನಾ ಹಿನ್ನೆಲೆಯಲ್ಲಿ ಹೆಚ್ಚಿನ ಜನರು ಮನೆಯಲ್ಲೇ ಕೆಲಸವನ್ನು ಬದಲಾಯಿಸಿದ್ದರಿಂದ ಟೆಲಿಕಾಂ ಉದ್ಯಮವು ಯಾವುದೇ ಋಣಾತ್ಮಕ ಪರಿಣಾಮವನ್ನು ಕಾಣಲಿಲ್ಲ. ಆನ್ ಲೈನ್ ಪಾವತಿಯೂ ಹೆಚ್ಚಾಗಿದೆ. ಆದರೆ ಟೆಲಿಕಾಮ್ ಕಂಪನಿಗಳ ಆದಾಯ ಹೊಂದಾಣಿಕೆಯ ಬಾಕಿಯ ಕೇವಲ ಹತ್ತು ಶೇಕಡಾ ಮಾತ್ರ ಪಾವತಿಸಿದ್ದು ಉಳಿದ ಮೊತ್ತವನ್ನು ಮುಂದಿನ ಹಣಕಾಸು ವರ್ಷಗಳಲ್ಲಿ ಪಾವತಿಸಬೇಕಾಗುತ್ತದೆ. ಆದ್ದರಿಂದ ಎಪ್ರಿಲ್ 1 ರಿಂದ ತಮ್ಮ ಸುಂಕವನ್ನು ಕಂಪನಿಗಳು ಹೆಚ್ಚಿಸಲು ಬಯಸುತ್ತಿದೆ.

ಭಾರತೀಯ ಟೆಲಿಕಾಂ ಕಂಪನಿಗಳು ತಮ್ಮ ಸುಂಕವನ್ನು ಹೆಚ್ಚಿಸುತ್ತಿರುವುದು ಇದೇ ಮೊದಲಲ್ಲ. ಕಂಪನಿಗಳು 2019 ರ ಡಿಸೆಂಬರ್‌ನಲ್ಲಿ ಸುಂಕ ದರವನ್ನು ಹೆಚ್ಚಿಸಿದ್ದವು. ಆದರೆ ಪ್ರಸಕ್ತ ಸನ್ನಿವೇಶದಲ್ಲಿ ಇಂಧನ ಬೆಲೆಗಳು, ಎಲ್‌ಪಿಜಿ ಸಿಲಿಂಡರ್ ಬೆಲೆಗಳು ನಿರಂತರವಾಗಿ ಹೆಚ್ಚುತ್ತಿದೆ.ಈಗ ಗ್ರಾಹಕರು ಅತಿಹೆಚ್ಚು ಅವಲಂಭಿತರಾಗಿರುವ ಫೋನ್ ಕರೆಗಳು ಮತ್ತು ಡೇಟಾಗಳೂ ದುಬಾರಿಯಾದರೆ ಖಂಡಿತವಾಗಿಯೂ ಜನರ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.



Join Whatsapp