ಚಿತ್ರದುರ್ಗ: ರಾಹುಲ್ ಗಾಂಧಿ ಪಾದಯಾತ್ರೆ ಸ್ಥಳಗಳಲ್ಲಿ ಕಾಂಗ್ರೆಸ್ ಮಟಾಶ್ ಎಂಬ ಶ್ರೀರಾಮುಲು ಹೇಳಿಕೆಗೆ ವಿಪಕ್ಷ ನಾಯಕ ಬಿಕೆ ಹರಿಪ್ರಸಾದ್ ಕೋನಸಾಗರ ಗ್ರಾಮದಲ್ಲಿ ಟಾಂಗ್ ನೀಡಿದ್ದಾರೆ.
ಶ್ರೀರಾಮುಲು ಜೊತೆ ಇದ್ದವರು ನಾಲ್ಕೈದು ವರ್ಷ ಜೈಲಿಗೆ ಹೋಗಿದ್ದಾರೆ. ಸರ್ಕಾರ ಮುಗಿಯುವ ಒಳಗೆ 40% ಭ್ರಷ್ಟಾಚಾರದಲ್ಲಿ ಯಾರೆಲ್ಲಾ ಜೈಲಿಗೆ ಹೋಗುತ್ತಾರೆ ನೋಡೋಣ ಎಂದು ಹೇಳಿದರು.
ಯಡಿಯೂರಪ್ಪ ಬುದ್ದಿ ಭ್ರಮಣೆಯಿಂದ ಹೀಗೆ ಮಾತನಾಡುತ್ತಿದ್ದಾರೆ. 75 ವರ್ಷದ ಬಳಿಕ ಇದೀಗ ಮಾರ್ಗದರ್ಶಕ ಮಂಡಲಕ್ಕೆ ಕಳಿಸಿದ್ದಾರೆ. ಯಡಿಯೂರಪ್ಪ ಅವರಿಗೆ ಜೈಲಿಗೆ ಹೋಗುವ ಭಯವಿದೆ. ಅವರ ವಿರುದ್ಧದ ಕೇಸ್ ಗಳ ಸಂಪೂರ್ಣ ತನಿಖೆಗೆ ಸುಪ್ರೀಂ ಕೋರ್ಟ್ ಆದೇಶ ಮಾಡಿದೆ ಎಂದು ಹೇಳಿದರು.
56 ಇಂಚು ಎದೆಯ ಲೀಡರ್ ಮೋದಿ ಒಂದು ಪ್ರೆಸ್ ಮೀಟ್ ಮಾಡಿಲ್ಲ. ರಾಷ್ಟ್ರ ಜರ್ನಲಿಸ್ಟ್ ಗಳ ಪತ್ರಿಕಾ ಗೋಷ್ಠಿ ಮಾಡಿಲ್ಲ.ಕಾರಣ ಅವರಿಗೆ ಉತ್ತರಿಸಲು ಸಾಧ್ಯವಿಲ್ಲ ಎಂದು ಲೇವಡಿ ಮಾಡಿದರು.