ಮುಸ್ಲಿಮರು, ಕುರ್ ಆನ್ ವಿರುದ್ಧ ಅವಹೇಳನಕಾರಿ ಹೇಳಿಕೆ: ಹಿಂಜಾವೇ ರಾಜ್ಯ ಸಂಚಾಲಕನ ವಿರುದ್ಧ FIR

Prasthutha|

ಕೋಲಾರ: ಇಸ್ಲಾಮ್ ಧರ್ಮ, ಮುಸ್ಲಿಮರು ಹಾಗೂ ಕುರ್ ಆನ್ ವಿರುದ್ಧ ಅವಹೇಳನಕಾರಿಯಾಗಿ ಭಾಷಣ ಮಾಡಿ, ಮುಸ್ಲಿಮರ ಭಾವನೆಗೆ ಧಕ್ಕೆ ತಂದ ಆರೋಪದಲ್ಲಿ ಹಿಂದೂ ಜಾಗರಣ ವೇದಿಕೆಯ ರಾಜ್ಯ ಸಂಚಾಲಕ ಕೇಶವಮೂರ್ತಿ ಮತ್ತು ಇತರರ ವಿರುದ್ಧ ಕೋಲಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

ಜುಲೈ 1ರಂದು ಕೋಲಾರದ ಬಂಗಾರಪೇಟೆಯ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆ ಬಳಿ ಕೇಶವಮೂರ್ತಿ, ದುರುದ್ದೇಶಪೂರ್ವಕವಾಗಿ ಇಸ್ಲಾಮ್ ಧರ್ಮವನ್ನು ಅವಮಾನಿಸಿದ್ದಾರೆ. ಕುರ್ ಆನ್ ಅನ್ನು ದುರುಪಯೋಗಪಡಿಸಿಕೊಂಡು ಮುಸ್ಲಿಮರ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಕೋಲಾರ ಅಂಜುಮನ್ ಇಸ್ಲಾಮ್ ನ ಅಧ್ಯಕ್ಷ ಜಮೀರ್ ಅಹ್ಮದ್ ದೂರು ನೀಡಿದ್ದಾರೆ.

ಧಾರ್ಮಿಕ ನಂಬಿಕೆಗಳನ್ನು ಅಪಹಾಸ್ಯ ಮಾಡಿ, ಪವಿತ್ರ ಕುರ್ ಆನ್ ಅನ್ನು ಕ್ರಿಮಿನಲ್ ಬುಕ್ ಎಂದು ಹೇಳುವ ಮೂಲಕ ಮುಸ್ಲಿಮರ ಭಾವನೆಗಳನ್ನು ಘಾಸಿಗೊಳಿಸಿ, ಸಮಾಜದ ವಿವಿಧ ವರ್ಗಗಳ ನಡುವೆ ದ್ವೇಷ ಸೃಷ್ಟಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

- Advertisement -

ಕೋಲಾರ ಪೊಲೀಸರು ಆರೋಪಿ ಮತ್ತು ಇತರರ ವಿರುದ್ಧ ಐಪಿಸಿ 153ಎ, 153ಬಿ, 295ಎ, 504, 505(1), 505(2) ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.



Join Whatsapp