ಶ್ರೀರಾಮನ ವಿರುದ್ಧ ಅವಹೇಳನಕಾರಿ ಹೇಳಿಕೆ; ಪ್ರೊಫೆಸರ್ ರನ್ನು ವಜಾ ಮಾಡಿದ ಪಂಜಾಬ್ ವಿಶ್ವವಿದ್ಯಾಲಯ

Prasthutha|

ಚಂಡೀಗಢ: ಶ್ರೀರಾಮನ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ಆರೋಪದ ಮೇಲೆ ಸಹಾಯಕ ಪ್ರಾಧ್ಯಾಪಕರೊಬ್ಬರನ್ನು ಪಂಜಾಬ್ ವಿಶ್ವವಿದ್ಯಾಲಯದಿಂದ ವಜಾ ಮಾಡಲಾಗಿದೆ .

- Advertisement -

ಗುರುಸಂಗ್ ಪ್ರೀತ್ ಕೌರ್  ಎಂಬವರು ವಜಾಗೊಳಿಸಲ್ಪಟ್ಟ ಪ್ರಾಧ್ಯಾಪಕಿ. ಇವರು ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿಯ ಸಹಾಯಕ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಇವರ ಹೇಳಿಕೆಗಳನ್ನು ಒಳಗೊಂಡ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ಪ್ರಾಧ್ಯಾಪಕರನ್ನು ವಿಶ್ವವಿದ್ಯಾಲಯದಿಂದ ಹೊರಹಾಕಬೇಕೆಂದು ಒತ್ತಾಯಿಸಿ ಪ್ರತಿಭಟನೆಗಳು ನಡೆದಿದ್ದವು.

ತಮ್ಮ ಉದ್ಯೋಗಿಯೊಬ್ಬರ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಈ ವೀಡಿಯೊವು ಕೆಲವು ಜನರ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ. “ಈ ಹೇಳಿಕೆಗಳು ಸಂಪೂರ್ಣವಾಗಿ ವೈಯಕ್ತಿಕವಾಗಿವೆ ಮತ್ತು ಅವುಗಳಲ್ಲಿ ಯಾವುದನ್ನೂ ನಾವು ಸ್ವೀಕರಿಸುವುದಿಲ್ಲ” ಎಂದು ವಿಶ್ವವಿದ್ಯಾಲಯ ಅಧಿಕೃತ ಹೇಳಿಕೆ ನೀಡಿದೆ.

- Advertisement -

“ನಮ್ಮದು ಜಾತ್ಯತೀತ ವಿಶ್ವವಿದ್ಯಾಲಯವಾಗಿದ್ದು, ಅದು ಎಲ್ಲಾ ಧರ್ಮಗಳ ಜನರನ್ನು ಸಮಾನ ಪ್ರೀತಿ ಮತ್ತು ಗೌರವದಿಂದ ನಡೆಸಿಕೊಳ್ಳುತ್ತದೆ. ಈ ಘಟನೆಗೆ ವಿಷಾದಿಸುತ್ತೇನೆ ಮತ್ತು ಪ್ರಾಧ್ಯಾಪಕರನ್ನು ವಿಶ್ವವಿದ್ಯಾಲಯದಿಂದ ವಜಾಗೊಳಿಸಲಾಗಿದೆ  ” ಎಂದು ವಿಶ್ವವಿದ್ಯಾಲಯದ ಅಧಿಕಾರಿ ಹೇಳಿದರು.

Join Whatsapp