ಬೆಂಗಳೂರು: ಕಾಂಗ್ರೆಸ್ ವಿರುದ್ಧ ಸುದ್ದಿ ರೂಪದಲ್ಲಿ ಜಾಹೀರಾತು ಪ್ರಕಟಿಸಿದ ಕನ್ನಡ ದಿನ ಪತ್ರಿಕೆಗಳ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ.
ಕಳೆದ ವಾರವಷ್ಟೆ ಕರ್ನಾಟಕಕ್ಕೆ ಭಾರತ ಐಕ್ಯತಾ ಯಾತ್ರೆ ಆಗಮಿಸುವ ಸಂದರ್ಭದಲ್ಲಿ ಬಿಜೆಪಿ ಕನ್ನಡಪ್ರಭ ಪತ್ರಿಕೆಯಲ್ಲಿ ಸುಳ್ಳುಗಳಿಂದ ಕೂಡಿದ ನಿಂದನಾತ್ಮಕ ಜಾಹೀರಾತು ನೀಡಿ ಟೀಕೆಗೆ ಗುರಿಯಾಗಿತ್ತು.
ಕಾಂಗ್ರೆಸ್ ಪದಾಧಿಕಾರಿ ಸೂರ್ಯ ಮುಕುಂದರಾಜ್ ಟ್ವೀಟ್ ಮಾಡಿ, ಅಭಿವೃದ್ಧಿ ಕೆಲಸಗಳ ಮೇಲೆ ಜಾಹೀರಾತು ನೀಡುವುದನ್ನು ನೋಡಿದ್ದೇವೆ. ಒಬ್ಬ ವ್ಯಕ್ತಿಯ ಭಾರತ ಜೋಡಿಸುವ ಕಾರ್ಯವನ್ನು ಸಹಿಸದೆ ತೇಜೋವಧೆ ಮಾಡುವ ಜಾಹೀರಾತು ನೀಡಿದ ಮೊದಲಿಗರು ಸಂಘಪರಿವಾರದವರು. ಈ ಜಾಹೀರಾತುಗಳನ್ನು ಕೊಟ್ಟವರ ಮತ್ತು ಪ್ರಕಟಿಸಿದವರ ವಿಕೃತ ಮನಸ್ಸು ಅನಾವರಣವಾಗಿದೆ ಎಂದು ಟೀಕಿಸಿದ್ದಾರೆ.
ಕೆಪಿಸಿಸಿ ಸಾಮಾಜಿಕ ಮಾಧ್ಯಮದ ರಾಜ್ಯ ಉಪಾಧ್ಯಕ್ಷ ರವಿ ನಂದನ್ ಟ್ವೀಟ್ ಮಾಡಿ, ವಿಶ್ವವಾಣಿ, ಕನ್ನಡಪ್ರಭ, ಹೊಸದಿಗಂತ, ಸಂಯುಕ್ತ ಕರ್ನಾಟಕ ಈ ಪತ್ರಿಕೆಗಳು ಅಳಿವಿನಂಚಿನಲ್ಲಿವೆ. ಆದಷ್ಟು ಬೇಗ ನಾಶವಾಗಿ ಹೋಗಲಿ. ಪತ್ರಿಕಾ ಲೋಕಕ್ಕೆ ಕಳಂಕ ಇವು. ವೃತ್ತಿ ಗೌರವ ಇಲ್ಲದ ಇಂತಹ ಪತ್ರಿಕೆಗಳ ಮಾಲೀಕರು ನೇರವಾಗಿ ವೇಶ್ಯಾವಾಟಿಕೆ ದಂಧೆ ಮಾಡಿದರೆ ಗೌರವ ಆದರೂ ಇರುತ್ತೆ ಎಂದು ಟ್ವೀಟ್ ಮೂಲಕ ಹರಿಹಾಯ್ದಿದ್ದಾರೆ.