ಔರಂಗಜೇಬ್ ಸಮಾಧಿ ಮುಚ್ಚಿದ ಭಾರತೀಯ ಸರ್ವೇಕ್ಷಣಾ ಇಲಾಖೆ

Prasthutha|

ಮುಂಬೈ: ಭಾರತೀಯ ಸರ್ವೇಕ್ಷಣಾ ಇಲಾಖೆ ಎಎಸ್ ಐ-  ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ಔರಂಗಬಾದ್ ನಗರಲ್ಲಿರುವ ಮೊಗಲ್ ಸಾಮ್ರಾಟ ಔರಂಗಜೇಬ್ ಅವರ ಸಮಾಧಿ ಸ್ಥಳವನ್ನು ಮುಚ್ಚಿದೆ.

- Advertisement -

ಮಹಾರಾಷ್ಟ್ರ ನವನಿರ್ಮಾಣ ಸೇನೆಯ ವಕ್ತಾರ ಗಜಾನನ ಕಾಳೆ ಈ ಸಮಾಧಿಯ ಅಗತ್ಯವಿಲ್ಲ. ಅದನ್ನು ನಾಶಪಡಿಸಿ ಎಂದು ಟ್ವೀಟ್ ಮಾಡಿದ್ದರು. ಅನಂತರ ಮಸೀದಿ ಸಮಿತಿಯೊಂದು ಅದಕ್ಕೆ ಬೀಗ ಭದ್ರತೆ ಒದಗಿಸಲು ನೋಡಿತ್ತು.

ಕಾಳೆ ಮಂಗಳವಾರ ನಾಶ ಪಡಿಸುವ ಬೆದರಿಕೆ ಹಾಕಿದ ಬೆನ್ನಲ್ಲೇ, ಮಸೀದಿ ಸಮಿತಿ ಬುಧವಾರ ಅದಕ್ಕೆ ಬೀಗ ಹಾಕಿ ಭದ್ರತೆ ಭದ್ರತೆಯಲ್ಲಿಡಲು ಯತ್ನಿಸಿದರೆ, ಗುರುವಾರ ಎಎಸ್ ಐ ಸಮಾಧಿ ಸ್ಥಳವನ್ನು ಮುಚ್ಚಿದೆ.

- Advertisement -

ಈ ತಿಂಗಳ ಆರಂಭದಲ್ಲಿ ಎಐಎಂಐಎಂ ಪಕ್ಷದ ನಾಯಕ ಅಕ್ಬರುದ್ದೀನ್ ಉವೈಸಿಯವರು ಈ ಸಮಾಧಿಗೆ ಭೇಟಿ ನೀಡಿದ್ದರು. ಅದನ್ನು ಬಿಜೆಪಿ, ಶಿವಸೇನೆ ಮತ್ತು ರಾಜ್ ಠಾಕ್ರೆಯವರ ಎಂಎನ್ ಎಸ್ ಖಂಡಿಸಿದ್ದವು.

ಬಿಜೆಪಿಯವರಂತೂ ದೇಶದ್ರೋಹ ಕಾಯ್ದೆಯಡಿ ಅಕ್ಬರುದ್ದೀನ್ ರನ್ನು ಬಂಧಿಸಬೇಕು ಎಂದು ಬೊಬ್ಬೆ ಹಾಕಿದ್ದರು.

ಮಹಾರಾಷ್ಟ್ರವು ಈಗ ಶಾಂತಿಯಿಂದಿದೆ. ಇಂಥ ಹೇಳಿಕೆಯು ಮತ್ತೊಂದು ವಿವಾದವನ್ನು ಹುಟ್ಟು ಹಾಕುವ ಪ್ರಯತ್ನ ಎಂದು ಎನ್ ಸಿ ಪಿ ನಾಯಕ ಶರದ್ ಪವಾರ್ ಹೇಳಿದ್ದರು.

ಔರಂಗಾಬಾದ್ ನಗರದ ಹೊರವಲಯ ಕುಲ್ದಾಬಾದ್ ನಲ್ಲಿರುವ ಔರಂಗಜೇಬ್ ಸಮಾಧಿಗೆ ಔರಂಗಬಾದ್ ಗ್ರಾಮಾಂತರ ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ. ಎಎಸ್ಐ ಮುಂದಿನ ರಾದ್ಧಾಂತ ತಡೆಯಲು ಸದ್ಯ ಮುಚ್ಚಿದ್ದು ಮುಂದೆ ಎಲ್ಲ ರೀತಿಯ ತಪಾಸಣೆಯ ಬಳಿಕ ಮಾತ್ರ ಭೇಟಿಗೆ ಅವಕಾಶ ನೀಡಲಾಗುವುದು ಎಂದು ಹೇಳಿದ್ದಾರೆ.

ಮಸೀದಿ ಸಮಿತಿ ಸಹ ಒಂದಷ್ಟು ಕಾಲ ಸಮಾಧಿ ಸ್ಥಳವನ್ನು ಮುಚ್ಚುವಂತೆ ಮತ್ತು ಹೆಚ್ಚಿನ ಭದ್ರತಾ ವ್ಯವಸ್ಥೆ ಮಾಡುವಂತೆ ಎಎಸ್ ಐಗೆ ಕೇಳಿಕೊಂಡಿದೆ. ಹಾಗೂ ಎಎಸ್ ಐ ಮಾತ್ರ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಹೇಳಿದೆ.

ಔರಂಗಬಾದ್ ವೃತ್ತದ ಎಎಸ್ ಐ ಸೂಪರಿನ್ ಟೆಂಡೆಂಟ್ ಮಿಲನ್ ಕುಮಾರ್ ಚೌಲೆಯವರು ಮಸೀದಿ ಮತ್ತು ಪೋಲೀಸರ ಕೋರಿಕೆ ಮೇರೆಗೆ ಔರಂಗಜೇಬ್ ಸಮಾಧಿ ಸ್ಥಳವನ್ನು ಗುರುವಾರದಿಂದ ಐದು ದಿನಗಳ ಕಾಲ ಮುಚ್ಚಲಾಗಿದೆ ಎಂದರು.  

“ಸಮಾಧಿ ಸ್ಥಳದಲ್ಲಿ ಸದ್ಯದಲ್ಲಿ ಯಾವ ತೊಂದರೆಯೂ ಇಲ್ಲ, ಯಾವುದೇ ಅಹಿತಕರ ಘಟನೆ ಕೂಡ ನಡೆದಿಲ್ಲ. ಆದರೆ ಮುಂಜಾಗ್ರತಾ ಕ್ರಮವಾಗಿ ಪ್ರವಾಸಿಗರಿಗೆ ಸದ್ಯ ಔರಂಗಜೇಬ್ ಸಮಾಧಿ ಸ್ಥಳವನ್ನು ಮುಚ್ಚಲಾಗಿದೆ” ಎಂದು ಔರಂಗಾಬಾದ್ ಪೊಲೀಸ್ ಠಾಣೆಯ ಠಾಣಾಧಿಕಾರಿ ತಿಳಿಸಿದರು.



Join Whatsapp