ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸದಂತೆ ಬೈಡನ್‌ಗೆ ಡೆಮಾಕ್ರಾಟ್ ನಾಯಕ ಶಿಫ್ ಬಹಿರಂಗ ಕರೆ

Prasthutha|

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸದಂತೆ ಹಾಲಿ ಅಧ್ಯಕ್ಷ ಜಾನ್ ಬೈಡೆನ್‌ಗೆ ಡೆಮಾಕ್ರಾಟ್ ಪಕ್ಷದ ಪ್ರಮುಖ ನಾಯಕ, ಆಯಡಂ ಶಿಫ್ ಬಹಿರಂಗ ಕರೆ ನೀಡಿದ್ದಾರೆ. ಅಮೆರಿಕ ಕಾಂಗ್ರೆಸ್‌ನ ಸದಸ್ಯ ಶಿಫ್ ಲಾಸ್‌ಏಂಜಲೀಸ್ ಟೈಮ್ಸ್ ಗೆ ನೀಡಿದ ಸಂದರ್ಶನದಲ್ಲಿ ಈ ಕರೆ ನೀಡಿದ್ದಾರೆ.

- Advertisement -

ಅಮೆರಿಕ ಅಧ್ಯಕ್ಷರಾಗಿ ಬೈಡನ್ ಕಾರ್ಯನಿರ್ವಹಣೆಯನ್ನು ಪ್ರಶಂಸಿಸಿದ ಅವರು, ಆದರೆ ಅಮೆರಿಕದ ಪ್ರಜಾಪ್ರಭುತ್ವದ ಬುನಾದಿಗೆ ಅತಿ ದೊಡ್ಡ ಅಪಾಯವಾಗಿರುವ ಟ್ರಂಪ್ ಅವರನ್ನು ಚುನಾವಣೆಯಲ್ಲಿ ಸೋಲಿಸಲು 81 ವರ್ಷದ ಬೈಡನ್ ರಿಗೆ ಇರುವ ಸಾಮರ್ಥ್ಯದ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದಾರೆ.

ನವೆಂಬರ್‌ನಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಬೈಡನ್ ಅವರ ವಯಸ್ಸು, ಆರೋಗ್ಯವು ಅವರ ಗೆಲುವಿಗೆ ತೊಡಕಾಗುವ ಆತಂಕ ಡೆಮಾಕ್ರಾಟ್ ಪಕ್ಷವನ್ನು ಕಾಡುತ್ತಿದೆ ಎಂದೂ ಶಿಫ್ ಹೇಳಿದ್ದಾರೆ.

- Advertisement -

ಈ ವರ್ಷದ ನವೆಂಬರ್ನಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಜೊತೆಗೆ ಸೆನೆಟ್ ಚುನಾವಣೆಯೂ ನಡೆಯಲಿದ್ದು, ಶಿಫ್ ಕ್ಯಾಲಿಫೋರ್ನಿಯಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

ಕಳೆದ ತಿಂಗಳು ಟ್ರಂಪ್ ಜೊತೆ ಟಿವಿಯಲ್ಲಿ ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ ಬೈಡನ್ ಅವರು ಅತ್ಯಂತ ಕಳಪೆ ಪ್ರದರ್ಶನ ತೋರಿದ್ದರು. ಆಗಾಗ್ಗೆ ಅವರು ಗೊಂದಲಕ್ಕೀಡಾದಂತೆ ಹಾಗೂ ಮೇಧಾವಿತನವನ್ನು ಪ್ರದರ್ಶಿಸಲು ವಿಫಲರಾದಂತೆ ಕಾಣುತ್ತಿದ್ದರು ಎಂದರು



Join Whatsapp