ಮಂಗಳೂರು: ಕರ್ನಾಟಕ ಮತ್ತು ಕೇರಳ ರಾಜ್ಯದ ಗಡಿ ಭಾಗವಾದ ಮಂಗಳೂರಿನ ತಲಪಾಡಿಯಲ್ಲಿ
ಎರಡೂ ರಾಜ್ಯದ ಪೆಟ್ರೋಲ್ ಬಂಕ್ ಗಳಿದ್ದು, ಕರ್ನಾಟಕ ಪೆಟ್ರೋಲ್ ಗೆ ಭಾರಿ ಬೇಡಿಕೆ ಇದೆ.
ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬುಧವಾರ ಪೆಟ್ರೋಲ್ ದರ ರೂ.101.58 ಡೀಸೆಲ್ ದರ ರೂ. 85. 93 ಇದೆ. ಕರ್ನಾಟಕದಲ್ಲಿ ಕೇರಳಕ್ಕಿಂತ ರೂ. 8.63 ಕಡಿಮೆ ದರದಲ್ಲಿ ಡೀಸೆಲ್, ರೂ. 5.85 ಕಡಿಮೆ ದರದಲ್ಲಿ ಪೆಟ್ರೋಲ್ ಸಿಗುತ್ತಿದೆ. ಪೆಟ್ರೋಲ್ ಮತ್ತು ಡೀಸೆಲ್ಗೆ ಆಯಾ ರಾಜ್ಯಗಳು ವಿಧಿಸುವ ತೆರಿಗೆಯಿಂದ ರಾಜ್ಯದಿಂದ ರಾಜ್ಯಕ್ಕೆ ಈ ವ್ಯತ್ಯಾಸವಾಗುತ್ತಿದೆ. ಹೀಗಾಗಿ ಕೇರಳ ಗಡಿಭಾಗದ ವಾಹನ ಸವಾರರು ಕರ್ನಾಟಕದ ಪೆಟ್ರೋಲ್ ಬಂಕ್ಗೆ ಬಂದು ಪೆಟ್ರೋಲ್- ಡೀಸೆಲ್ ಹಾಕಿಸಿಕೊಳ್ಳುತ್ತಿದ್ದಾರೆ.