ಛತ್ತೀಸ್ ಗಢದಲ್ಲಿ ಪ್ರತಿದಿನ ಹಿಂದೂ ರಾಷ್ಟ್ರದ ಬೇಡಿಕೆ ಹೆಚ್ಚುತ್ತಿದೆ: ಅಸದುದ್ದೀನ್ ಉವೈಸಿ ಕಳವಳ

Prasthutha|

ನವದೆಹಲಿ: ಛತ್ತೀಸ್ ಗಢದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ‘ಧರ್ಮ ಸಂಸದ್’ ಕಾರ್ಯಕ್ರಮ ಆಯೋಜಿಸಿದ ಬಳಿಕ ರಾಯ್ ಪುರ ಮತ್ತು ಬಿಲಾಸ್ ಪುರದಲ್ಲಿ ಮತ್ತೆ ಎರಡು ಹಿಂದೂ ರಾಷ್ಟ್ರ ವಿಚಾರ ಸಂಕೀರಣಗಳು ನಡೆದಿವೆ. ರಾಜ್ಯದೆಲ್ಲೆಡೆ ಹಿಂದೂ ರಾಷ್ಟ್ರದ ಪರಿಕಲ್ಪನೆ ಪ್ರತಿದಿನ ಬೆಳೆಯುತ್ತಿದೆ ಎಂದು ಎಂದು ಎಐಎಂಐಎಂ ಮುಖ್ಯಸ್ಥ, ಸಂಸದ ಅಸದುದ್ದೀನ್ ಉವೈಸಿ ಆತಂಕ ವ್ಯಕ್ತಪಡಿಸಿದ್ದಾರೆ.

- Advertisement -

ಈ ಕುರಿತು ಟ್ವೀಟ್ ನಲ್ಲಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಮತ್ತು ಬಿಜೆಪಿ ಛತ್ತೀಸ್ ಗಢದಲ್ಲಿ ಧರ್ಮ ಸಂಸದ್ ಆಯೋಜಿಸಿದ ಬಳಿಕ ರಾಯ್ ಪುರ ಮತ್ತು ಬಿಲಾಸ್ ಪುರದಲ್ಲಿ ಮತ್ತೆ ಎರಡು ಹಿಂದೂ ರಾಷ್ಟ್ರ ವಿಚಾರಗೋಷ್ಠಿಯನ್ನು ನಡೆಸಲಾಯಿತು. ಇನ್ನು ಮೂರು ವರ್ಷಗಳಲ್ಲಿ ಭಾರತ ಹಿಂದೂ ರಾಷ್ಟ್ರವಾಗಲಿದೆ ಎಂದು ಹೇಳಲಾಗಿತ್ತು ಎಂದರು.

ರಾಜ್ಯದಲ್ಲಿ ಪ್ರತಿದಿನ ಹಿಂದೂ ರಾಷ್ಟ್ರದ ಪರಿಕಲ್ಪನೆಯ ಬೇಡಿಕೆ ಹೆಚ್ಚುತ್ತಲೇ ಇದ್ದು, ಮುಖ್ಯಮಂತ್ರಿ ಭೂಷೇಶ್ ಬಘೇಲ್ ಜನರ ಗಮನವನ್ನು ಬೇರೆಡೆಗೆ ತಿರುಗಿಸುವ ಕೆಲಸದಲ್ಲಿ ನಿರ್ತರಾಗಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.



Join Whatsapp