ಮಂಗಳೂರು: RTI ಕಾರ್ಯಕರ್ತ ಬಾಳಿಗಾ ಹತ್ಯೆಗೆ ಆರು ವರ್ಷ; ಎಸ್ಐಟಿ ರಚನೆಗೆ ಒತ್ತಾಯಿಸಿ ಕಾಲ್ನಡಿಗೆ ಜಾಥಾ

Prasthutha|

ಮಂಗಳೂರು: ಆರ್ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಹತ್ಯೆ ನಡೆದು ಆರು ವರುಷವಾದ ಹಿನ್ನೆಲೆ ಕೊಲೆಗೈದ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಹಾಗೂ ಪ್ರಕರಣವನ್ನು ಎಸ್ಐಟಿ ತನಿಖೆಗೆ ನೀಡುವಂತೆ ಒತ್ತಾಯಿಸಿ ದೇಶಪ್ರೇಮಿ ಸಂಘಟನೆಗಳ ಒಕ್ಕೂಟದ ವತಿಯಿಂದ ಕಾಲ್ನಡಿಗೆ ಜಾಥಾ ನಡೆಯಿತು.

- Advertisement -

ನಗರದ ಕಾರ್ ಸ್ಟ್ರೀಟ್ ನ ವೆಂಕಟರಮಣ ದೇಗುಲದಿಂದ ಪಿವಿಎಸ್ ನ ಕಲಾಕುಂಜದಲ್ಲಿರುವ ವಿನಾಯಕ ಬಾಳಿಗಾ ಮನೆಯವರೆಗೆ ಜಾಥಾ ನಡೆಯಿತು.

ಇದಕ್ಕೂ ಮುನ್ನಾ ದೇಗುಲದ ಮುಂಭಾಗ ಬಾಳಿಗಾ ಸಹೋದರಿ ಅನುರಾಧ ಬಾಳಿಗಾ ದೇವರಿಗೆ ನಮಸ್ಕರಿಸಿ ಪ್ರಾರ್ಥನೆ ಸಲ್ಲಿಸುವ ಮೂಲಕ ಕಾಲ್ನಡಿಗೆ ಜಾಥಾಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭ ಅನುರಾಧ ಬಾಳಿಗಾ ಭಾವುಕರಾಗಿ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಲಿ ಎಂದು ಬೇಡಿಕೊಂಡರು.

- Advertisement -

ವಿಚಾರವಾದಿ, ದೇಶಪ್ರೇಮಿಗಳ ಸಂಘಟನೆಗಳ ಒಕ್ಕೂಟದ ಮುಂದಾಳು ಪ್ರೊ. ನರೇಂದ್ರ ನಾಯಕ್ ಮಾತನಾಡಿ, ಕೊಲೆ ಹಿಂದಿರುವ ನೈಜ ಆರೋಪಿಗಳ ಪತ್ತೆ ಇನ್ನೂ ಆಗಿಲ್ಲ. ಹತ್ಯೆ ನಡೆದು ಆರು ವರುಷಗಳೇ ಆದರೂ ಸಮರ್ಪಕ ತನಿಖೆ ನಡೆದಿಲ್ಲ. ಹೀಗಾಗಿ ಪ್ರಕರಣವನ್ನು ಎಸ್ಐಟಿ ತನಿಖೆಗೆ ನೀಡುವಂತೆ ಒತ್ತಾಯಿಸಿದರು.

ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ಮಾತನಾಡಿ, ಭಾರತದಲ್ಲಿ ಇಂತಹ ಹತ್ಯೆಗಳು ನಡೆಯುತ್ತಿದೆ ಅನ್ನೋದೆ ಆತಂಕ. ಓರ್ವ ಹೆಣ್ಣಾಗಿ, ಸಹೋದರಿಯಾಗಿ ನಾನು ಆ ಕುಟುಂಬದ ಜೊತೆ ನಿಲ್ಲುತ್ತೇನೆ. ಶೀಘ್ರವೇ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಲಿ ಎಂದರು.

ಮೆರವಣಿಯಲ್ಲಿ ಅಮೃತ್ ಶೆಣೈ, ಭಾರತಿ ಬೋಳಾರ, ವೀಣಾ ಭಟ್, ಮಂಜುಳಾ ನಾಯಕ್, ಸಂತೋಷ್ ಬಜಾಲ್, ಜೆರಾಲ್ಡ್ ಟವರ್ಸ್ , ಶಾಲೆಟ್ ಪಿಂಟೋ ಮತ್ತಿತ್ತರರು ಉಪಸ್ಥಿತರಿದ್ದರು.

ಕೊಡಿಯಾಲ್ ಬೈಲ್ ಮಾರ್ಗವಾಗಿ ಸಾಗಿದ ಜಾಥಾದಲ್ಲಿ ನೂರಾರು ಮಂದಿ ಹೆಜ್ಜೆ ಹಾಕಿದರು.    




Join Whatsapp