ಡೆಲಿವರಿ ಬಾಯ್, ಕೆಲಸದಾಕೆ ಲಿಫ್ಟ್ ಬಳಸಿದರೆ 300 ರೂಪಾಯಿ ದಂಡ ‘ನಾವು 2022ರಲ್ಲಿದ್ದೇವೆ’ ಎಂದ IAS ಅಧಿಕಾರಿ !

Prasthutha|

ಹೈದರಾಬಾದ್: ಚಾಲಕರು, ಡೆಲಿವರಿ ಹುಡುಗರು, ಮನೆ ಕೆಲಸದವರು ಮುಖ್ಯ ಲಿಫ್ಟ್ ಬಳಸಿದರೆ 300 ರೂಪಾಯಿ ದಂಡ ಹಾಕಲಾಗುತ್ತದೆ ಎಂಬ ನೋಟಿಸ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹೈದರಾಬಾದ್’ನ ಹೌಸಿಂಗ್ ಸೊಸೈಟಿಯೊಂದರ ಲಿಫ್ಟ್’ನಲ್ಲಿ ಈ ನೋಟಿಸ್ ಹಾಕಲಾಗಿದ್ದು, ಫೋಟೋ ವೈರಲ್ ಆಗುತ್ತಿದ್ದಂತೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

- Advertisement -

ತೆಲಂಗಾಣದ ಸೈಬರಾಬಾದ್’ನ ಫ್ಲಾಟ್ ಒಂದರಲ್ಲಿ ಈ ನೋಟಿಸ್ ಕಂಡುಬಂದಿರುವುದಾಗಿ ಪತ್ರಕರ್ತ ಹರ್ಷಾ ವದ್ಲಮನಿ ಹಾಗೂ 2009ರ ಬ್ಯಾಚಿನ IAS ಅಧಿಕಾರಿ ಅವಾನಿಶ್ ಶರಣ್ ಎಂಬವರು ಟ್ವಿಟರ್’ನಲ್ಲಿ ಈ ಫೋಟೋವನ್ನು ಹಂಚಿಕೊಂಡಿದ್ದು, ‘ನಾವು 2022ರಲ್ಲಿದ್ದೇವೆ’ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ಅವಾನಿಶ್ ಶರಣ್ ಪೋಸ್ಟ್ ಕೆಳಗೆ ಸಾಕಷ್ಟು ಮಂದಿ ಹೌಸಿಂಗ್ ಸೊಸೈಟಿಯ ನಿರ್ಧಾರವನ್ನು ಟೀಕಿಸಿದ್ದಾರೆ. 2022 ಅಥವಾ 2020 ಆಗಲಿ, ಈ ತಾರತಮ್ಯ ಇಂದು ನಿನ್ನೆಯದಲ್ಲ, ಭಾರತದ ಮೆಟ್ರೋ ನಗರಗಳಲ್ಲಿ ಇದು ಸಾಮಾನ್ಯ ಎಂಬುದಾಗಿ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.



Join Whatsapp