ದೆಹಲಿ: ದಿಲ್ಲಿಯಿಂದ ವಾರಣಾಸಿಗೆ ತೆರಳುತ್ತಿದ್ದ ಇಂಡಿಗೋ ವಿಮಾನದ ಹವಾನಿಯಂತ್ರಣ ವ್ಯವಸ್ಥೆಯಲ್ಲಿ ಸಮಸ್ಯೆ ತಲೆದೋರಿದ್ದು ಪ್ರಯಾಣಿಕರು ಅಸ್ವಸ್ಥರಾಗಿದ್ದಾರೆ.
6E 2235 ವಿಮಾನದಲ್ಲಿ AC ಕಾರ್ಯನಿರ್ವಹಿಸದ ಕಾರಣ ಹಲವಾರು ಪ್ರಯಾಣಿಕರು ಅಸ್ವಸ್ಥರಾಗಿದ್ದು ಉಸಿರುಗಟ್ಟುವಿಕೆಗೆ ದೂರು ನೀಡಿದರು. ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಮಾನದೊಳಗೆ ಕೋಪಗೊಂಡ ಪ್ರಯಾಣಿಕರು ಪ್ರತಿಭಟನೆ ನಡೆಸುತ್ತಿರುವುದು ವಿಡಿಯೊದಲ್ಲಿದೆ. ಕೆಲವರು ಗಾಳಿ ಬೀಸಲು ವಿಮಾನದಲ್ಲಿನ ಮ್ಯಾಗಜೀನ್ಗಳು ಮತ್ತು ಏರ್ ಕ್ರಾಫ್ಟ್ ಸುರಕ್ಷತಾ ಕಾರ್ಡ್ ಗಳನ್ನು ಬಳಸುತ್ತಿದ್ದಾರೆ.
ಕೆಲವು ವರದಿಗಳ ಪ್ರಕಾರ, ಕೆಲವು ಮಹಿಳಾ ಪ್ರಯಾಣಿಕರ ಆರೋಗ್ಯ ಹದಗೆಟ್ಟಿದೆ. ಒಬ್ಬ ಮಹಿಳೆ ಮೂರ್ಛೆ ಹೋಗಿದ್ದಾರೆ. ವಾರಣಾಸಿಗೆ ಹೋಗುವ ವಿಮಾನದ ಪ್ರಯಾಣಿಕರೊಬ್ಬರು ಯಾರಿಗಾದರೂ ಏನಾದರೂ ಸಂಭವಿಸಿದರೆ ಯಾರು ಹೊಣೆಗಾರಿಕೆಯನ್ನು ತೆಗೆದುಕೊಳ್ಳುತ್ತಾರೆ ಎಂದು ಕೇಳಿದರು